ಕರ್ನಾಟಕ     ಮೈಸೂರು     ದೇವರಾಜ ಮೊಹಲ್ಲಾ


ಒಂದು ಸಮುದಾಯವೆಂದರೆ, ಒಂದೇ ವಿಧದ ಉತ್ಪನ್ನಗಳನ್ನು ಉತ್ಪಾದಿಸುವ ಮತ್ತು ಸಾಮಾನ್ಯವಾದ ಅವಕಾಶಗಳು ಮತ್ತು ಅಪಾಯಗಳನ್ನು ಎದುರಿಸುತ್ತಿರುವ ಘಟಕಗಳ ಭೌಗೋಳಿಕ (ನಗರ/ಪಟ್ಟಣ/ಕೆಲವು ಅಕ್ಕಪಕ್ಕದ ಹಳ್ಳಿಗಳ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಕುಶಲಕರ್ಮಿಗಳ ಸಮುದಾಯವೆಂದರೆ, ಕರಕುಶಲ/ಕೈಮಗ್ಗ ಉತ್ಪನ್ನಗಳನ್ನು ಉತ್ಪಾದಿಸುವ ಗೃಹ ಸ್ಥಾಪಿತ ಘಟಕಗಳ ಭೌಗೋಳಿಕ (ಮುಖ್ಯವಾಗಿ ಹಳ್ಳಿಗಳಲ್ಲಿನ/ಪಟ್ಟಣ ಪ್ರದೇಶಗಳಲ್ಲಿನ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಮಾದರಿ ಸಮುದಾಯದಲ್ಲಿ, ಇಂತಹ ಉತ್ಪಾದಕರು, ಸಾಮಾನ್ಯವಾಗಿ, ಅನೇಕ ತಲೆಮಾರುಗಳಿಂದ ಸ್ಥಾಪಿತವಾದ ಉತ್ಪನ್ನಗಳನ್ನು ಉತ್ಪಾದಿಸುತ್ತಾ ಬಂದಿರುವ ಸಾಂಪ್ರದಾಯಿಕ ಕೋಮಿಗೆ ಸೇರಿದವರಾಗಿರುತ್ತಾರೆ. ವಾಸ್ತವವಾಗಿ, ಬಹುತೇಕ ಕುಶಲಕರ್ಮಿ ಸಮುದಾಯಗಳು ಶತಮಾನಗಳಷ್ಟು ಹಳೆಯ ಕುಶಲಕರ್ಮಿಗಳು.  

ದೇವರಾಜ ಮೊಹಲ್ಲಾ ಸಮುದಾಯದ ಬಗ್ಗೆ :-

ದೇವರಾಜ ಮೊಹಲ್ಲಾ ಸಮುದಾಯವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಡಿ ಬರುತ್ತದೆ.

ದೇವರಾಜ ಮೊಹಲ್ಲಾ ತಾಲ್ಲೂಕಿನ ಸಮುದಾಯವು  ತನ್ನ ಪ್ರಬಲ ಕಾರ್ಮಿಕ ಬಳಗಕ್ಕೆ ಆಧಾರವನ್ನು ಒದಗಿಸಲು 175 ಕ್ಕೂ ಅಧಿಕ ಕುಶಲಕರ್ಮಿಗಳನ್ನು ಮತ್ತು 8 ಸ್ವಸಹಾಯ ಗುಂಪುಗಳನ್ನು ರಚಿಸಲು ಶಕ್ತವಾಗಿದೆ. ಈ ಒಟ್ಟುಗೂಡಿಸುವಿಕೆಯು ದಿನೇ ದಿನೇ ಸಂವೇಗವನ್ನು ಗಳಿಸುತ್ತಿದೆ.

ಬೆತ್ತ ಮತ್ತು ಬಿದಿರು:-

ಬೆತ್ತ ಮತ್ತು ಬಿದಿರು, ಕರ್ನಾಟಕದಲ್ಲಿ ದೈನಂದಿನ ಜೀವನದಲ್ಲಿ ಉಪಯೋಗಿಸುವ ಅತಿ ಸಾಮಾನ್ಯವಾದ ಎರಡು ವಸ್ತುಗಳು. ಗೃಹಬಳಕೆಯ ಉತ್ಪನ್ನಗಳಿಂದ ಹಿಡಿದು ಗೃಹಗಳ ನಿರ್ಮಾಣ, ನೇಯ್ಗೆಯ ವಸ್ತುಗಳು, ಸಂಗೀತೋಪಕರಣಗಳವರೆಗೆ ಎಲ್ಲಾವೂ ಬಿದಿರಿನಿಂದಲೇ ಮಾಡಲ್ಪಟ್ಟಿವೆ. ಪ್ರಮುಖವಾಗಿ ಒಂದು ಗೃಹ-ಆಧಾರಿತ ಕೈಗಾರಿಕೆಯಾಗಿರುವ ಈ ಕುಶಲಕರ್ಮವು ಯಾವುದೇ ಯಾಂತ್ರಿಕ ಸಾಧನಗಳನ್ನು ಉಪಯೋಗಿಸುವುದಿಲ್ಲ. ಬುಟ್ಟಿ ಹೆಣೆಯುವುದನ್ನು ಬಿಟ್ಟರೆ, ಬಿದಿರನ್ನು ಮುಖ್ಯವಾಗಿ ಮನೆಗಳ ನಿರ್ಮಾಣ ಮತ್ತು ಬೇಲಿ ಹಾಕಲು ಉಪಯೋಗಿಸಲಾಗುತ್ತದೆ. ಕುಶಲಕರ್ಮವು ಸಾಂಪ್ರದಾಯಿಕವಾಗಿ ಕೃಷಿಕರಿಗೆ ಅಕಾಲದಲ್ಲಿ ಪಾರ್ಟ್-ಟೈಂ ಉದ್ಯೋಗವನ್ನು ನೀಡುತ್ತಿತ್ತು,ಆದರೆ ಈಗ ವಾಣಿಜ್ಯ ಕ್ಷೇತ್ರದಲ್ಲಿ ಪೂರ್ಣಸಮಯದ ಕುಶಲಕರ್ಮಿಗಳನ್ನು ಕಾಣಬಹುದಾಗಿದೆ.

ಬಿದಿರು ಉತ್ಪನ್ನಗಳು ಕರ್ನಾಟಕದ ಎಲ್ಲೆಡೆ ಕಾಣಸಿಗುತ್ತವೆ. ಅವುಗಳ ಉಪಯೋಗವನ್ನು ಅವಲಂಬಿಸಿ, ಬಿದಿರು ಬುಟ್ಟಿಗಳಲ್ಲಿ ನಾನಾ ವಿಧಗಳು ಮತ್ತು ಆಕಾರಗಳಿವೆ. ಮನೆಯ ಗಂಡಸರು ಸಾಮಾನ್ಯವಾಗಿ ಈ ಬಿದಿರು ಬುಟ್ಟಿಗಳನ್ನು ನೇಯುತ್ತಾರೆ. ಪ್ರತಿ ಜಿಲ್ಲೆಯು ತನ್ನದೇ ಆದ ಸ್ವಂತ ವಿಶಿಷ್ಟ ಶೈಲಿಯನ್ನು ಹೊಂದಿದೆ. ಸಾಮಾನ್ಯವಾಗಿ, ಶಂಖಾಕಾರದ ಬುಟ್ಟಿಗಳನ್ನು ಒಯ್ಯುವ ಬುಟ್ಟಿಗಳಾಗಿಯೂ ಮತ್ತು ಚೌಕ ಅಥವಾ ವೃತ್ತಾಕಾರದ ತಳವಿರುವ ಬುಟ್ಟಿಗಳನ್ನು ಶೇಖರಿಸಿಡಲು ಉಪಯೋಗಿಸುತ್ತಾರೆ. ಇದಕ್ಕೆ ಒಂದು ಉದಾಹರಣೆ ಕರ್ನಾಟಕದ ಮೈಸೂರಿನ ಬಿದಿರು ಬುಟ್ಟಿ. ಇದು ಒಳಕ್ಕೆ ಮುಖಮಾಡಿರುವ ಒಂದು ಚೌಕ ತಳವನ್ನು ಹೊಂದಿದ್ದು, ಇದರಿಂದ ಚೌಕದ ಮೂಲೆಗಳು ಆಧಾರವಾಗಿ ವರ್ತಿಸುತ್ತವೆ, ಮತ್ತು ಇದು ಅಗಲವಾದ ಬಾಯಿಯನ್ನು ಹೊಂದಿರುತ್ತದೆ. ಅದನ್ನು ಅಡಿಕೆಕಾಯಿಗಳನ್ನು ಶೇಖರಿಸಿಡಲು ಉಪಯೋಗಿಸಲಾಗುತ್ತದೆ. ಈ ಬಿದಿರು ಬುಟ್ಟಿಯನ್ನು ಒಂದು ಎರಕದ ಅಚ್ಚಿನ ಸಹಾಯದಿಂದ ಮಾಡಲ್ಪಟ್ಟಿದ್ದು,  ಕುತ್ತಿಗೆಯ ಮತ್ತು ಬಾಯಿಯ ಆಕಾರವನ್ನು ಪಡೆಯಲು ಉಪಯೋಗಿಸಲಾಗುತ್ತದೆ. ಕುತ್ತಿಗೆಯಿಂದ ತಳದವರೆಗೂ, ಕಂದು ಬಣ್ಣದ ಹಾಳೆಯನ್ನು ಶಂಖದ ರೂಪದಲ್ಲಿ ಮಾಡಿ, ಅದರ ತುದಿಯು ತಳವನ್ನು ತಾಕುವಂತೆ ಬುಟ್ಟಿಯಲ್ಲಿ ಹಾಕಲಾಗುತ್ತದೆ. ಶಂಖದ ಆಕಾರವನ್ನು ಉಳಿಸಿಕೊಳ್ಳಲು ಮರಳನ್ನು ಒಳಗೆ ತುಂಬಿಸಲಾಗುತ್ತದೆ ಮತ್ತು ಶಂಖದ ಆಕಾರಕ್ಕೆ ತಕ್ಕಂತೆ ನೇಯಲಾಗುತ್ತದೆ.

ಪಾರಂಪರ್ಯ ಸೂರ್ಯನ-ಮಬ್ಬಾದ ಜಪಿ, ಇಂದಿಗೂ ಅತಿ ಪ್ರಸಿದ್ದ ಬಿದಿರು ಪದಾರ್ಥವಾಗಿದೆ. ಶ್ರೇಷ್ಟ ಚೀನೀ ಪ್ರಯಾಣಿಕನಾದ, ಹ್ಯೂಯೆನ್ ತ್ಸಾಂಗನು ಕರ್ನಾಟಕಕ್ಕೆ ಭೇಟಿ ನೀಡಿದ ಕಾಲದಿಂದಲೂ ಇದು ಬಳಕೆಯಲ್ಲಿದೆ.

ಉಪಯೋಗಿಸಲಾದ ಕಚ್ಛಾ ವಸ್ತುಗಳು :-

ಕಚ್ಛಾ ವಸ್ತುಗಳಲ್ಲಿ ಸಮೃದ್ಧವಾಗಿರುವ ಕರ್ನಾಟಕವು, ವಿವಿಧ ಬಗೆಯ ಸುಂದರವಾದ ಉತ್ಪನ್ನಗಳನ್ನು ಹೊಂದಿದೆ. ಪರ್ವತ ಪ್ರದೇಶದ ಮತ್ತು ಬಯಲುಸೀಮೆಯ ಜನರು, ತಮ್ಮದೇ ಆದ ಸ್ವಂತ ಶೈಲಿಗಳನ್ನು & ವಿನ್ಯಾಸಗಳನ್ನು ಹೊಂದಿದ್ದಾರೆ. ಬೆತ್ತ & ಬಿದಿರುಗಳನ್ನು, ಬುಟ್ಟಿಗಳನ್ನು ಮಾಡುವುದಲ್ಲದೆ,  ಪೀಠೋಪಕರಣಗಳಾಗಿಯೂ ಸಹ ಮಾರ್ಪಡಿಸುತ್ತಾರೆ, ಕನಿಷ್ಟ ಸಾಧನಗಳನ್ನು ಉಪಯೋಗಿಸಿ ಬೆತ್ತದಿಂದ ನವೀನ ಆವಿಷ್ಕಾರದ ವಸ್ತುಗಳನ್ನು ಮಾಡಲಾಗುತ್ತದೆ.  ಅದನ್ನು ಧಾರ್ಮಿಕ ಕಾರಣಗಳಿಗಾಗಿ ಉಪಯೋಗಿಸಲು ಶುದ್ಧವೆಂದು ಪರಿಗಣಿಸಲಾಗಿತ್ತು. ಕುಶಲಕರ್ಮ ನೈಪುಣ್ಯತೆಗಳಿಗೆ ಒಂದು ಅತ್ಯುತ್ತಮ ಉದಾಹರಣೆಯು, ಮಾನವನ ಪ್ರಾಚೀನ ಸೃಷ್ಟಿಗಳಲ್ಲಿ ಒಂದಾದ ಕಬಾಂಬೂ, ಇದನ್ನು ಹುಲ್ಲನ್ನು ಹುಲ್ಲಿನೊಂದಿಗೆ ಸೇರಿಸಿ, ಅದರಲ್ಲಿ ಬೆತ್ತದ ಕೆಲಸವನ್ನು ಹೆಣೆದು ಮಾಡಲಾಗುತ್ತದೆ. ಸಮೃದ್ಧ ಕಾಡುಗಳಲ್ಲಿ ಲಭ್ಯವಿರುವ ಈ ಕಚ್ಛಾವಸ್ತುವು ಕೈಗಾರಿಕೆಗೆ ಅವಶ್ಯಕವಿರುವ ಶಕ್ತಿ ಮತ್ತು ಪುಷ್ಟಿಯನ್ನು ನೀಡುತ್ತದೆ.

ಕ್ರಿಯೆ:-

ಬೆತ್ತ ಮತ್ತು ಬಿದಿರುಗಳ ಇಡೀ ಕಾಂಡವನ್ನು ಒಂದು ಗರಗಸದಿಂದ ಕತ್ತರಿಸಿ, ಒಂದು ಕುಡುಗೋಲಿನಿಂದ ವಿವಿಧ ಗಾತ್ರಗಳಲ್ಲಿ ಲಂಬವಾಗಿ ಸೀಳಲಾಗುತ್ತದೆ. ಈ ಬೆತ್ತವನ್ನು ಬಾಗುವಂತೆ ಮಾಡಲು, ಸಾಮಾನ್ಯವಾಗಿ ಒಂದು ಸೀಮೆ ಎಣ್ಣೆಯ ದೀಪದೊಡನೆ ನಿಧಾನವಾಗಿ ಕಾಯಿಸಲಾಗುತ್ತದೆ. ಈ ವಸ್ತುಗಳನ್ನು ಎರಡು ವಿಭಿನ್ನ ರೂಪಗಳಾಗಿ ವಿಂಗಡಿಸಬಹುದು: ಬುಟ್ಟಿಗಳಿಗಾಗಿ ಸುರುಳಿರೂಪ; ಮತ್ತು ಚಾಪೆಗಳಿಗಾಗಿ ನೇಯ್ಗೆಯ ರೂಪ. ಸುರುಳಿಕಾರದ ಬುಟ್ಟಿಯಲ್ಲಿ, ಬುಟ್ಟಿಯ ತಳಪಾಯವನ್ನು ಮೊದಲು ಕೇಂದ್ರ ಗರ್ಭದ ಸುತ್ತ ಒಂದು ಬೆತ್ತವನ್ನು ಸುರುಳಿಯ ರೂಪದಲ್ಲಿ ಸುತ್ತಲಾಗುತ್ತದೆ. ಅದನ್ನು ಸಿಂಬಿಯ ಸುತ್ತಿನ ರೂಪದಲ್ಲಿ ಕಟ್ಟಿ ಇಚ್ಛಿಸಿದ ಎತ್ತರವನ್ನು ಪಡೆಯುವವರೆಗೂ ಕ್ರಮೇಣ ಅದರ ಅಗಲವನ್ನು ಹೆಚ್ಚಿಸಲಾಗುತ್ತದೆ. ಪಟ್ಟಿಗಳನ್ನು ಹೊಲಿಯುವ ಮೂಲಕ ಈ ಸುರುಳಿಗಳನ್ನು ಒಟ್ಟಿಗೆ ಸೇರಿಸಲಾಗುತ್ತದೆ, ಇದನ್ನು ಎರಡು ವಿಧಗಳಲ್ಲಿ ಮಾಡಬಹುದು: ತಳಪಾಯದ ಸುರುಳಿಯ ಹೊಸ ಭಾಗದ ಮೇಲೆ ಪ್ರತಿ ಹೊಲಿಗೆಯನ್ನು ಹರಿಸಲಾಗುತ್ತದೆ.

 

ಎಂಟರ ಆಕಾರವನ್ನು ಮಾಡಲಾಗುತ್ತದೆ, ಅಂದರೆ ಹೊಲಿಗೆಯು ಹಿಂದಿನ ಸುರುಳಿಯ ಹಿಂದೆ, ಮೇಲೆ ಮತ್ತು ಕೆಳಗೆ ಹಾಗೂ ಹೊಸ ಸುರುಳಿಯ ಮೇಲೆಯು ಹರಿಯುತ್ತದೆ. ಹೀಗೆ, ಸುರುಳಿಯ ವಸ್ತುವನ್ನು ಪಟ್ಟಿಗಳೊಂದಿಗೆ ಹೊಲೆದು, ಬುಟ್ಟಿಯನ್ನು ಮಾಡಲಾಗುತ್ತದೆ. ಹೊಂದುವ ಸರಿಗೆ, ಕಾಗದ ಮತ್ತು ಕರಟಗಳಿಂದ ಬುಟ್ಟಿಗಳನ್ನು ಅಲಂಕೃತಗೊಳಿಸಲಾಗುತ್ತದೆ. ಕುಶಲಕರ್ಮಿಗಳು ದಾವೋ ಎಂಬ ಕತ್ತರಿಸುವ ಸಾಧನಗಳ ಸಹಾಯದಿಂದ ಬಿದಿರನ್ನು ಇಚ್ಛಿಸಿದ ಉದ್ದದ ವಿವಿಧ ಗಾತ್ರಗಳಾಗಿ ಕತ್ತರಿಸುತ್ತಾರೆ. ವಿಭಿನ್ನ ವಿಧಗಳ ಚಾಕುಗಳ ಸಹಾಯದಿಂದ ಬಿದಿರನ್ನು ಬೇಕಾದ ದಪ್ಪಕ್ಕೆ ತಕ್ಕಂತೆ ಕತ್ತರಿಸಲಾಗುತ್ತದೆ. ಈ ರೀತಿ ಸಿದ್ಧವಾದ ವಸ್ತುವನ್ನು ಒಂದು ಪದಾರ್ಥ ಅಥವಾ ಪೀಠೋಪಕರಣದ ಚೌಕಟ್ಟನ್ನು ಮಾಡಲು ಉಪಯೋಗಿಸಲಾಗುತ್ತದೆ ಆದರೆ ಪೆನ್ಸಿಲ್ ಬೆತ್ತವನ್ನು ವಿನ್ಯಾಸ ಮತ್ತು ರಕ್ಷಾಹೊದಿಕೆಯ ಉದ್ದೇಶಕ್ಕಾಗಿ ಉಪಯೋಗಿಸಲಾಗುತ್ತದೆ. ದಪ್ಪವಾದ ಬೆತ್ತವನ್ನು ಒಂದು ಪದಾರ್ಥ ಅಥವಾ ಪೀಠೋಪಕರಣದ ಚೌಕಟ್ಟನ್ನು ಮಾಡಲು ಉಪಯೋಗಿಸಲಾಗುತ್ತದೆಯಾದರೆ ಪೆನ್ಸಿಲ್ ಬೆತ್ತವನ್ನು ವಿನ್ಯಾಸ ಮತ್ತು ರಕ್ಷಾಹೊದಿಕೆಯ ಉದ್ದೇಶಕ್ಕಾಗಿ ಉಪಯೋಗಿಸಲಾಗುತ್ತದೆ. ಒಂದು ಪೀಠೋಪಕರಣ ಅಥವಾ ಪದಾರ್ಥಕ್ಕಾಗಿ ಬೆತ್ತವನ್ನು ಬೇಕಾದ ಆಕಾರದಲ್ಲಿ ಬಾಗಿಸಲು ಒಂದು ಊದುದೀಪದಿಂದ ಬಿಸಿ ಮಾಡಲಾಗುತ್ತದೆ. ತುದಿಗಳನ್ನು ಅಂಟು ಮತ್ತು ಮೊಳೆಯ ಮೂಲಕ ಜೋಡಿಸಲಾಗುತ್ತದೆ ಮತ್ತು ಸಂದುಗಳನ್ನು ಪೆನ್ಸಿಲ್ ಬೆತ್ತದ ಪಟ್ಟಿಗಳಿಂದ ಒಂದುಗೂಡಿಸಲಾಗುತ್ತದೆ. ಬೆತ್ತ & ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಮರಳುಹಾಳೆಯಿಂದ ಶುದ್ದಗೊಳಿಸಿ, ಮೆರುಗೆಣ್ಣೆಯಿಂದ ಮೆರುಗುಗೊಳಿಸಲಾಗುತ್ತದೆ.

 

ಬೆತ್ತ ಮತ್ತು ಬಿದಿರು ಪದಾರ್ಥಗಳ ಉತ್ಪಾದನೆಯಲ್ಲಿ ಇಡೀ ಕಾಂಡವನ್ನು ಒಂದು ಗರಗಸದಿಂದ ಕತ್ತರಿಸಿ, ಒಂದು ಕುಡುಗೋಲಿನಿಂದ ಅಥವಾ ದಾವೋದಿಂದ ವಿವಿಧ ಗಾತ್ರಗಳಲ್ಲಿ ಲಂಬವಾಗಿ ಸೀಳಲಾಗುತ್ತದೆ.ದಟ್ಟವಾಗಿ ಕಟ್ಟಲಾದ ನಾರುಗಳನ್ನು ಒಂದು ನಯವಾದ ತಾಂತ್ರಿಕತೆಯಲ್ಲಿ ಕಾಂಡದಲ್ಲಿ ಅವಶ್ಯಕವಾದ ಪ್ರಮಾಣದ ನೀರಿನಾಂಶವನ್ನು ಮಾತ್ರ ಬಿಟ್ಟು ಲಂಬವಾಗಿ ಸೀಳಲಾಗುತ್ತದೆ. ಅದನ್ನು ಆಕಾರದಲ್ಲಿ ಬಾಗಿಸುವ ಮುನ್ನ ಒಂದು ಸೀಮೆ ಎಣ್ಣೆಯ ದೀಪವನ್ನು ಉಪಯೋಗಿಸಿ ಬೆತ್ತವನ್ನು ಕಾಯಿಸಲಾಗುತ್ತದೆ.

ಕಾರ್ಯವಿಧಾನಗಳು:-

ಬೆತ್ತದ ಉತ್ಪನ್ನಗಳ ಉತ್ಪಾದನೆಯಲ್ಲಿ ವಿವಿಧ ಹಂತಗಳಿದ್ದು, ಕಾಡುಗಳಿಂದ ಕಚ್ಛಾವಸ್ತುಗಳನ್ನು ಶೇಖರಿಸುವುದರಿಂದ ಆರಂಭವಾಗುತ್ತದೆ. ನಯವಾದ ಮೇಲ್ಮೈಯನ್ನು ಪಡೆಯಲು, ಕಚ್ಛಾ ಬೆತ್ತದ ಮೇಲ್ಪದರವನ್ನು ಕೆರೆದು ತೆಗೆಯಲಾಗುತ್ತದೆ. ಉದ್ದನೆಯ ಬೆತ್ತದ ಕಡ್ಡಿಗಳನ್ನು ಸಣ್ಣ ಚೂರುಗಳಾಗಿ ಕತ್ತರಿಸಲಾಗುತ್ತದೆ ನಂತರ ಬೆತ್ತವನ್ನು ಸೀಳಿಸಿ ಸಣ್ಣನೆಯ ಪಟ್ಟಿಗಳನ್ನು ಪಡೆಯಲಾಗುತ್ತದೆ. ಬೆತ್ತವನ್ನು ಇನ್ನೂ ಸೀಳಿಸಿ, ಎಷ್ಟು ಸಣ್ಣಗೆ ಬೇಕೋ ಅಷ್ಟು ಸಣ್ಣಗೆ ಸೀಳಿಸಬಹುದು. ಸೀಳಿಸಿದ ಬೆತ್ತವನ್ನು ಒಂದು ಊದುದೀಪವನ್ನು ಉಪಯೋಗಿಸಿ ಬಾಗಿಸಲಾಗುತ್ತದೆ, ಆಗ ಮೇಲ್ಮೈಯಲ್ಲಿ ಸ್ವಲ್ಪ ಭಾಗ ಸುಟ್ಟುಹೊಗಬಹುದು; ಇವನ್ನು ಮರಳುಹಾಳೆಯಿಂದ ಉಜ್ಜಿ ತೆಗೆಯಬಹುದು. ಇದರ ನಂತರ, ಅದರಿಂದ ಇಚ್ಛಿಸಿದ ವಸ್ತುಗಳ ವಿನ್ಯಾಸದ ಆಧಾರದಲ್ಲಿ ಬೆತ್ತವನ್ನು ನೇಯಬಹುದಾಗಿದೆ. ಉತ್ಪನ್ನಗಳಿಗೆ ಕೊನೆಯ ಸ್ಪರ್ಶಗಳನ್ನು ನೀಡಿದ ನಂತರ, ಈ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳುಹಿಸುವ ಮುನ್ನ ಮೆರುಗೆಣ್ಣೆ ಲೇಪಿತಗೊಳಿಸಲಾಗುತ್ತದೆ.

ಹೇಗೆ ತಲುಪುವುದು:-

ಮೈಸೂರಿನಿಂದ ಹತ್ತಿರದ ವಿಮಾನ ನಿಲ್ದಾಣವೆಂದರೆ, ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು. ಬೆಂಗಳೂರು ಒಂದು ಕೈಗಾರಿಕಾ ನಗರವೂ ಸಹ ಹೌದು. ಸರಿಸುಮಾರು ಎಲ್ಲಾ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೊಲ್ಕತ್ತ ಮತ್ತು ಬೆಂಗಳೂರಿನ ನಡುವೆ ಬಹಳಷ್ಟು ವಿಮಾನಗಳು ಕಾರ್ಯನಿರ್ವಹಿಸುತ್ತವೆ. ಮೈಸೂರು ಮತ್ತು ಕರ್ನಾಟಕದ ಪ್ರಮುಖ ನಗರಗಳ ನಡುವೆ ಅನುಕೂಲಕರವಾದ ರಸ್ತೆಗಳ ಜಾಲವಿದೆ. ಒಂದು ರಾಜ್ಯ ಹೆದ್ದಾರಿಯು ನಗರವನ್ನು ಬೆಂಗಳೂರಿಗೆ (139 ಕಿ.ಮೀ.ಗಳು) ಸಂಪರ್ಕಿಸುತ್ತದೆ. ಮೈಸೂರಿನ ನಗರದ ಒಳಗೆ ಒಂದು ರೈಲ್ವೆ ನಿಲ್ದಾಣವಿದೆ. ಅದು ಬೆಂಗಳೂರು ಮತ್ತು ದಕ್ಷಿಣ ಭಾರತದ ಇತರ ನಗರಗಳಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಪ್ರತಿಷ್ಟಿತ ವಿಲಾಸಿ ರೈಲುಗಳು ಮತ್ತು ಇತರ ಮೈಲುಗಳು ಮತ್ತು ಎಕ್ಸ್ ಪ್ರೆಸ್ ರೈಲುಗಳ ಸೇವೆಗಳು ಈ ನಿಲ್ದಾಣದಲ್ಲಿ ಲಭ್ಯವಿದೆ.








ಕರ್ನಾಟಕ     ಮೈಸೂರು     ಶ್ರೀ ಶಿವಶರಣ ಕೇಥೇಶ್ವರ ಮೇದಾರ ಕೈಗಾರಿಕಾ ಸಹಕಾರ ಸಂಘ