ಕರ್ನಾಟಕ     ಮೈಸೂರು     ಮೈಸೂರು


ಒಂದು ಸಮುದಾಯವೆಂದರೆ, ಒಂದೇ ವಿಧದ ಉತ್ಪನ್ನಗಳನ್ನು ಉತ್ಪಾದಿಸುವ ಮತ್ತು ಸಾಮಾನ್ಯವಾದ ಅವಕಾಶಗಳು ಮತ್ತು ಅಪಾಯಗಳನ್ನು ಎದುರಿಸುತ್ತಿರುವ ಘಟಕಗಳ ಭೌಗೋಳಿಕ (ನಗರ/ಪಟ್ಟಣ/ಕೆಲವು ಅಕ್ಕಪಕ್ಕದ ಹಳ್ಳಿಗಳ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಕುಶಲಕರ್ಮಿಗಳ ಸಮುದಾಯವೆಂದರೆ, ಕರಕುಶಲ/ಕೈಮಗ್ಗ ಉತ್ಪನ್ನಗಳನ್ನು ಉತ್ಪಾದಿಸುವ ಗೃಹ ಸ್ಥಾಪಿತ ಘಟಕಗಳ ಭೌಗೋಳಿಕ (ಮುಖ್ಯವಾಗಿ ಹಳ್ಳಿಗಳಲ್ಲಿನ/ಪಟ್ಟಣ ಪ್ರದೇಶಗಳಲ್ಲಿನ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಮಾದರಿ ಸಮುದಾಯದಲ್ಲಿ, ಇಂತಹ ಉತ್ಪಾದಕರು, ಸಾಮಾನ್ಯವಾಗಿ, ಅನೇಕ ತಲೆಮಾರುಗಳಿಂದ ಸ್ಥಾಪಿತವಾದ ಉತ್ಪನ್ನಗಳನ್ನು ಉತ್ಪಾದಿಸುತ್ತಾ ಬಂದಿರುವ ಸಾಂಪ್ರದಾಯಿಕ ಕೋಮಿಗೆ ಸೇರಿದವರಾಗಿರುತ್ತಾರೆ. ವಾಸ್ತವವಾಗಿ, ಬಹುತೇಕ ಕುಶಲಕರ್ಮಿ ಸಮುದಾಯಗಳು ಶತಮಾನಗಳಷ್ಟು ಹಳೆಯ ಕುಶಲಕರ್ಮಿಗಳು.

ಮೈಸೂರು ಸಮುದಾಯದ ಬಗ್ಗೆ:-

ಮೈಸೂರು ಸಮುದಾಯವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಡಿ ಬರುತ್ತದೆ.

ಮೈಸೂರು ಸಮುದಾಯವು ತನ್ನ ಪ್ರಬಲ ಕಾರ್ಮಿಕ ಬಳಗಕ್ಕೆ ಆಧಾರವನ್ನು ಒದಗಿಸಲು 60ಕ್ಕೂ ಅಧಿಕ ಕುಶಲಕರ್ಮಿಗಳನ್ನು ಮತ್ತು 5 ಸ್ವಸಹಾಯ ಗುಂಪುಗಳನ್ನು ರಚಿಸಲು ಶಕ್ತವಾಗಿದೆ. ಈ ಒಟ್ಟುಗೂಡಿಸುವಿಕೆಯು ದಿನೇ ದಿನೇ ಸಂವೇಗವನ್ನು ಗಳಿಸುತ್ತಿದೆ.

ಟೆರ್ರಾಕೊಟ್ಟ(ಮಣ್ಣುಗಾರೆ):-

ಟೆರ್ರಾಕೊಟ್ಟ(ಮಣ್ಣುಗಾರೆ)ವನ್ನು ಬಡವರ ಮೂರ್ತಿ ಎಂದು ಪರಿಗಣಿಸಲಾಗಿದೆ. ಇದು ಮಾನವನು ಮೊದಲಬಾರಿ ಎರಕದ ಅಚ್ಚಿಗಾಗಿ ಉಪಯೋಗಿಸಿದ ಮಾಧ್ಯಮಗಳಲ್ಲಿ ಒಂದಾಗಿದೆ. ಇದಕ್ಕೆ ಉಪಯೋಗಿಸುವ ಜೇಡಿಯು ಸಾಮಾನ್ಯವಾಗಿ ನದಿ ತಳಗಳಲ್ಲಿ, ಕೊಂಡಗಳಲ್ಲಿ, ಕಂದಕಗಳಲ್ಲಿ ಸಿಗುವ ಎರಡು ಮೂರು ಬಗೆಯ ಜೇಡಿಗಳ ಮಿಶ್ರಣವಾಗಿದೆ. ಇದಕ್ಕೆ ಉಪಯೋಗಿಸುವ ಇಂಧನವು ಕೂಡ ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳಾದ ರೆಂಬೆಗಳು, ಒಣ ಎಲೆಗಳು ಅಥವಾ ಸೌದೆಗಳಲ್ಲಿ ಒಂದಾಗಿರುತ್ತದೆ. ಜೇಡಿಯ ಮಡಿಕೆಗಳನ್ನು ಮಾಡುವ ಇಟ್ಟಿಗೆಗೂಡುಗಳನ್ನು 700 - 800 ಡಿಗ್ರಿ ಸೆಲ್ಸಿಯಸ್ ಗಳ ನಡುವೆ ಕಾರ್ಯನಿರ್ವಹಿಸಲಾಗುತ್ತದೆ.

ಕುಂಭಕಾರ ಕುಟುಂಬಗಳ ಹೆಂಗಸರು ಚಕ್ರಗಳ ಮೇಲೆ ಕೆಲಸ ಮಾಡಿ ಮಡಿಕೆಗಳ ಗುಂಡಗಿನ ಕತ್ತುಗಳು ಮತ್ತು ಮೇಲ್ಭಾಗಗಳನ್ನು ಮಾಡುವ ಕುಂಬಾರರಾಗಿದ್ದಾರೆ. ಅವರು ಉರಿಸಿದ ಜೇಡಿಯ ಎರಕದ ಅಚ್ಚನ್ನು ಉಪಯೋಗಿಸಿ ಘನ ಜೇಡಿಯ ಆಟಿಕೆಗಳು ಮತ್ತು ಗೊಂಬೆಗಳನ್ನು ಸಹ ತಯಾರಿಸುತ್ತಾರೆ. ಜೇಡಿಯಿಂದ ದೇವ, ದೇವತೆಗಳ ದೊಡ್ಡ ಪ್ರತಿಮೆಗಳನ್ನು ಕೂಡ ಮಾಡಲಾಗುತ್ತದೆ ಮತ್ತು ಇದು ಈ ಕುಟುಂಬಗಳಿಗೆ ಸಾಕಷ್ಟು ಆದಾಯವನ್ನು ಗಳಿಸಿಕೊಡುತ್ತದೆ. ಭಾರತವು, ಪ್ರಾಚೀನ ಕಾಲದಲ್ಲಿ ತಮ್ಮ ಬೇರುಗಳನ್ನು ಹೊಂದಿರುವ ಟೆರ್ರಾಕೊಟ್ಟ(ಮಣ್ಣುಗಾರೆ) ಮತ್ತು ಕುಂಬಾರಿಕೆಗಳ ಪರಂಪರೆಗಳಲ್ಲಿ ಶ್ರೀಮಂತವಾಗಿದೆ. ಕುಂಬಾರಿಕೆಯು ಸಾರ್ವತ್ರಿಕವಾಗಿದ್ದು, ಅದರ ಪರಂಪರೆಯು ಐದು ದಶಲಕ್ಷ ವರ್ಷಗಳಷ್ಟು ಹಳೆಯದಾಗಿದೆ. ಟೆರ್ರಾಕೊಟ್ಟ(ಮಣ್ಣುಗಾರೆ) ಕುಂಬಾರಿಕೆಯನ್ನು, ಅದರ ಅಮ್ಮೋಹಕ ಆಕರ್ಷಣೆಯ ಕಾರಣ, ಕರಕೌಶಲದ ಸಾಹಿತ್ಯ ಎಂದು ಕರೆಯಲಾಗಿದೆ. ದೀಪಗಳು, ಗಡಿಗೆಗಳು, ಹೂದಾನಿಗಳು, ಮಡಿಕೆಗಳು, ಸಂಗೀತ ಸಾಧನಗಳು, ಮೇಣದಬತ್ತಿಯ ಮೇಜು ಇತ್ಯಾದಿ ಬಗೆಬಗೆಯ ಮಣ್ಣಿನಿಂದ ಮಾಡಿದ ವಸ್ತುಗಳನ್ನು ತಯಾರಿಸಲಾಗುತ್ತದೆ.

ಉಪಯೋಗಿಸಲಾದ ಕಚ್ಛಾ ವಸ್ತುಗಳು :-

ಮುಖ್ಯವಾದ ಕಚ್ಛಾವಸ್ತುವನ್ನು ಹತ್ತಿರದ ಕೆರೆಯಿಂದ ಸಂಗ್ರಹಿಸಲಾಗುತ್ತದೆ. ಜೇಡಿಗೆ ಬಾಳಿಕೆಯನ್ನು ಒದಗಿಸುವ ಸುಡುವ ಕ್ರಿಯೆಗಾಗಿ ಮತ್ತೊಂದು ಪ್ರಮುಖ ಕಚ್ಛಾವಸ್ತುವನ್ನು ಕೃಷಿಭೂಮಿಗಳಿಂದ ಶೇಖರಿಸಲಾಗುತ್ತದೆ. ಒಣಹುಲ್ಲು ಮತ್ತು ಕಾಡಿನ ತ್ಯಾಜ್ಯಗಳೊಂದಿಗೆ ಒಣ ತೆಂಗಿನಕಾಯಿ ಕಾಂಡಗಳನ್ನು ಸಹ ಉಪಯೋಗಿಸಲಾಗುತ್ತದೆ.


ಉಪ್ಕರನ್ :-


ಬಾಲ್ ಬೇರಿಂಗುಳ್ಳ ಕುಂಬಾರನ ಚಕ್ರವು ಕುಶಲಕರ್ಮದಲ್ಲಿ ಉಪಯೋಗಿಸಲಾಗುವ ಪ್ರಮುಖ ಉಪಕರಣ. ನಮಗೆ ವಿದ್ಯುತ್ ಚಾಲಿತ ಚಕ್ರಗಳೂ ಸಹ ಸಿಗುತ್ತವೆ. ಇತರ ಉಪಕರಣಗಳೆಂದರೆ ಕತ್ತರಿಸುವ, ಆಕಾರ ನೀಡುವ ಉಪಕರಣಗಳು, ಕತ್ತರಿಸುವ ತಂತಿ, ಕೈಯಿಂದ ಅಲಂಕರಿಸುವ ಚಕ್ರ. ಸಾಂಪ್ರದಾಯಿಕ ಇಟ್ಟಿಗೆಗೂಡನ್ನು ಟೆರ್ರಾಕೊಟ್ಟ(ಮಣ್ಣುಗಾರೆ) ವಸ್ತುಗಳನ್ನು ಶೇಖರಿಸಿಡಲು ಉಪಯೋಗಿಸಲಾಗುತ್ತದೆ.

ಕ್ರಿಯೆ:-

ಚಕ್ರದ ಮೇಲೆ ವಿವಿಧ ಉಪಯೋಗಗಳಿಗಾಗಿ ಬೇಕಾಗುವ ಆಕಾರಗಳನ್ನು ಮಾಡಲಾಗುತ್ತದೆ. ಸೊಂಡಿ ಅಥವಾ ಹಿಡಿಕೆಗಳಂತಹ ಕೆಲವು ಭಾಗಗಳನ್ನು ಬಿಟ್ಟುಬಿಡಲಾಗುತ್ತದೆ. ಅವುಗಳನ್ನು ಪ್ರತ್ಯೇಕವಾಗಿ ಎರಕ ಹುಯ್ದು ನಂತರ ದೇಹಕ್ಕೆ ಅಂಟಿಸಲಾಗುತ್ತದೆ. ಇದರ ನಂತರ, ಜಾಮಿತಿಯ ವಿನ್ಯಾಸಗಳನ್ನು ಮಾಡಲು ಮೇಲ್ಮೈಯ ಮೇಲೆ ವಿನ್ಯಾಸಗಳನ್ನು ಕೆತ್ತಿ ಅಲಂಕೃತಗೊಳಿಸಲಾಗುತ್ತದೆ. ಜೇಡಿಯನ್ನು, ಬೂದಿ ಮತ್ತು ಮರಳಿನೊಡನೆ ಮಿಶ್ರಣ ಮಾಡಿ, ಕಾಲಿನಿಂದ ಕಲೆಸಿ, ಶೇಖರಿಸಿ ನಂತರ ಲಾಹಾಸುರದಿಂದ ಕತ್ತರಿಸಲಾಗುತ್ತದೆ. ನಂತರ ಅದನ್ನು ಪೀಡದ ಮೇಲೆ ಕೈಯಿಂದ ಕಲೆಸಿ ಮುದ್ದೆ ಮಾಡಲಾಗುತ್ತದೆ. ಎಲ್ಲಾ ಘನ ಕಣಗಳನ್ನು ತೆಗೆಯಲಾಗುತ್ತದೆ. ಸಿದ್ಧವಾದ ಜೇಡಿಯನ್ನು ವಿವಿಧ ಆಕಾರಗಳನ್ನು ನೀಡಲು ಚಕ್ರದ ಮೇಲೆ ಇಡಲಾಗುತ್ತದೆ. ಒಂದು ಕುಂಬಾರನ ಮಡಿಕೆಯು ಗಟ್ಟಿ ಮರ ಅಥವಾ ಲೋಹದ ತಿರುಗಣೆಯ ಮೇಲೆ ತಿರುಗುತ್ತದೆ ಮತ್ತು ಅದರ ದೊಡ್ಡ ಗಾಲಿಯ ನಡುವು ತಿರುಗುವ ಮೇಜಿನಂತೆ ವರ್ತಿಸುತ್ತದೆ. ರಿಮ್ಮಿನ ರಂಧ್ರದಲ್ಲಿ ಒಂದು ಲಂಬ ಕೋಲನ್ನು ಸೇರಿಸಲಾಗಿರುತ್ತದೆ. ಕುಂಬಾರನು ಕಲೆಸಿದ ಜೇಡಿಯನ್ನು ಚಕ್ರದ ಕೇಂದ್ರದಲ್ಲಿ ಎಸೆಯುತ್ತಾನೆ ಮತ್ತು ಕೋಲಿನಿಂದ ಚಕ್ರವನ್ನು ಸುತ್ತುತ್ತಾನೆ. ಕೇಂದ್ರತ್ಯಾಗಿ ಬಲದ ಕಾರಣ, ಜೇಡಿಯ ಮುದ್ದೆಯನ್ನು ಹೊರಕ್ಕೆ ಮತ್ತು ಮೇಲಕ್ಕೆ ಎಳೆದು, ಪಾತ್ರೆಯ ರೂಪದಲ್ಲಿ ಮಾಡಲಾಗುತ್ತದೆ. ಇದನ್ನು ಒಂದು ತಂತಿಯಿಂದ ಎಳೆದು, ಒಣಗಿಸಿ ಒಂದು ಕುಂಬಾರನ ಇಟ್ಟಿಗೆಗೂಡಿನಲ್ಲಿ ಸುಡಲಾಗುತ್ತದೆ. ಸುಟ್ಟ ನಂತರ ಜೇಡಿಯ ಪದಾರ್ಥಗಳು ಟೆರ್ರಾಕೊಟ್ಟ(ಮಣ್ಣುಗಾರೆ) ಆಗಿ ಪರಿವರ್ತಿತವಾಗುತ್ತವೆ. ಮಡಿಕೆಗಳನ್ನು ಸಾಮಾನ್ಯ ತೆರೆದ-ಗುಣಿಗಳುಳ್ಳ ಇಟ್ಟಿಗೆಗೂಡುಗಳಲ್ಲಿ ಸುಡಲಾಗುತ್ತದೆ. ಇವು ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗವಾಗಿದ್ದು, 700 - 800 ಡಿಗ್ರಿ ಸೆಲ್ಸಿಯಸ್ ತಾಪಮಾನಗಳಲ್ಲಿ ಸುಡಲು ಯೋಗ್ಯವಾಗಿವೆ.

ಮಡಿಕೆಗಳನ್ನು, ಮಡಿಕೆಗಳ ಪದರಗಳಾಗಿ ಜೋಡಿಸಲಾಗಿದ್ದು, ಕೆಲವೊಮ್ಮೆ ಎಲೆಗಳು, ರೆಂಬೆಗಳು ಮತ್ತು ಬೆರಣಿಯನ್ನು ಸೇರಿಸಲಾಗುತ್ತದೆ. ಈ ರಾಶಿಯನ್ನು ನಂತರ ಭತ್ತದ ಒಣಹುಲ್ಲಿನ ಒಂದು ಪದರದಿಂದ ಮುಚ್ಚಲಾಗುತ್ತದೆ, ನಂತರ ಅದರ ಮೇಲೆ ಒಂದು ಸಣ್ಣ ಕೆಸರುಮಣ್ಣಿನ ಪದರವನ್ನು ಹಾಸಲಾಗುತ್ತದೆ. ಈ ಸುಡುವಕ್ರಿಯೆಯು ನಾಲ್ಕರಿಂದ ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಟೆರ್ರಾಕೊಟ್ಟ(ಮಣ್ಣುಗಾರೆ) ವಸ್ತುಗಳನ್ನು ಮಾಡಲು ಉಪಯೋಗಿಸುವ ಕಪ್ಪು, ಕೆಂಪು ಮತ್ತು ಹಳದಿ ಜೇಡಿಯನ್ನು, ಮೈಸೂರಿನಿಂದ ಸಣ್ಣ ಚೂರುಗಳಾಗಿ ಶೇಖರಿಸಲಾಗುತ್ತದೆ.

ಈ ವಸ್ತುವನ್ನು ಸರಿಯಾಗಿ ಮಿಶ್ರಿಸಿದ ನಂತರ ಸುಡು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ; ಇದರಿಂದ ಯಾವುದೇ ರೀತಿಯ ನೀರಿನಾಂಶವು ಉಳಿದಿದ್ದರೆ, ಆವಿಯಾಗಿ ಹೊರಟುಹೋಗುತ್ತದೆ.

ನಂತರ ಒದ್ದೆಯಾದ ಜೇಡಿಯ ಮಿಶ್ರಣವನ್ನು ಒಳ್ಳೆಯ ಜರಡಿಯ ಮೂಲಕ ಶೋಧಿಸಿ ಹರಳುಗಳನ್ನು ತೆಗೆಯಲಾಗುತ್ತದೆ. ಕೈಗಳಿಂದ ಆಕಾರವನ್ನು ನೀಡಿದ ನಂತರ ವಸ್ತುಗಳನ್ನು ಬೆರಣಿಗಳು, ಇಂಧನ ಮತ್ತು ಗರಗಸದ ಧೂಳು ಇತ್ಯಾದಿಗಳೊಡನೆ ವಿಶಿಷ್ಟ ಇಟ್ಟಿಗೆಗೂಡುಗಳಲ್ಲಿ ಬೇಯಿಸಲಾಗುತ್ತದೆ.

ಜೇಡಿಯನ್ನು ಬೂದಿ ಮತ್ತು ಮರಳಿನೊಡನೆ ಮಿಶ್ರಣ ಮಾಡಿ ಕಾಲಿನಿಂದ ಕಲೆಸಲಾಗುತ್ತದೆ. ನಂತರ ಅದನ್ನು ಪೀಡಾದ ಮೇಲೆ ಕಲೆಸಿ ಮುದ್ದೆ ಮಾಡಲಾಗುತ್ತದೆ. ಜಲ್ಲಿ, ಸಣ್ಣ ಹರಳುಗಲ್ಲು, ರೆಂಬೆಗಳು ಇತ್ಯಾದಿ ಘನ ಪದಾರ್ಥಗಳನ್ನು ತೆಗೆಯಲಾಗುತ್ತದೆ. ಸಿದ್ಧವಾದ ಜೇಡಿಯನ್ನು ಚಕ್ರದ ಮೇಲೆ ವಿವಿಧ ರೂಪಗಳನ್ನು ಮಾಡಲು ಇಡಲಾಗುತ್ತದೆ. ಒಂದು ಕುಂಬಾರನ ಮಡಿಕೆಯು ಮೃದುವಾದ ಕೀಲುಗಳನ್ನು ಹೊಂದಿದ್ದು, ಗಟ್ಟಿ ಮರ ಅಥವಾ ಲೋಹದ ತಿರುಗಣೆಯ ಮೇಲೆ ತಿರುಗುತ್ತದೆ ಮತ್ತು ತಿರುಗುವ ಮೇಜಿನಂತೆ ವರ್ತಿಸುವ ಒಂದು ದೊಡ್ಡ ಗಾಲಿಯ ನಡುವನ್ನು ಹೊಂದಿದೆ. ರಿಮ್ಮಿನ ರಂಧ್ರದಲ್ಲಿ ಒಂದು ಲಂಬ ಕೋಲನ್ನು ಸೇರಿಸಲಾಗಿರುತ್ತದೆ. ಕುಂಬಾರನು ಕಲೆಸಿದ ಜೇಡಿಯನ್ನು ಚಕ್ರದ ಕೇಂದ್ರದಲ್ಲಿ ಎಸೆಯುತ್ತಾನೆ ಮತ್ತು ಕೋಲಿನಿಂದ ಚಕ್ರವನ್ನು ಸುತ್ತುತ್ತಾನೆ. ಕೇಂದ್ರತ್ಯಾಗಿ ಬಲದ ಕಾರಣ, ಜೇಡಿಯ ಮುದ್ದೆಯನ್ನು ಹೊರಕ್ಕೆ ಮತ್ತು ಮೇಲಕ್ಕೆ ಎಳೆಯಲಾಗುತ್ತದೆ ಮತ್ತು ಪಾತ್ರೆಯ ರೂಪದಲ್ಲಿ ಮಾಡಲಾಗುತ್ತದೆ. ಇದನ್ನು ಒಂದು ತಂತಿಯಿಂದ ಎಳೆದು, ಒಣಗಿಸಿ ಒಂದು ಕುಂಬಾರನ ಇಟ್ಟಿಗೆಗೂಡಿನಲ್ಲಿ ಸುಡಲಾಗುತ್ತದೆ. ಸುಟ್ಟ ನಂತರ ಜೇಡಿಯ ಪದಾರ್ಥಗಳು ಟೆರ್ರಾಕೊಟ್ಟ(ಮಣ್ಣುಗಾರೆ) ಆಗಿ ಪರಿವರ್ತಿತವಾಗುತ್ತವೆ.


ಕಾರ್ಯವಿಧಾನಗಳು:-

ಚಕ್ರದ ಮೇಲೆ ಒರಟುಸ್ಥಿತಿಯಲ್ಲಿ ವಸ್ತುಗಳನ್ನು ಎಸೆಯುತ್ತಿದ್ದ ಕುಶಲಕರ್ಮಿಗಳಿಗೆ, ಅವಶ್ಯಕ ಗಾತ್ರಗಳ ಪ್ರಕಾರ ವಿಭಿನ್ನ ವಸ್ತುಗಳ ಆಕಾರಗಳನ್ನು ಹೇಗೆ ಪಡೆಯಬಹುದೆಂದು ತಿಳಿಸಿಕೊಡಲಾಯಿತು. ಬಿಸಾಡಿದ ಮಡಿಕೆಗಳನ್ನು ಉಪಯೋಗಿಸಿ ಕೌಶಲ್ಯಪೂರಿತ ವಸ್ತುಗಳನ್ನು ಮಾಡುವಂತೆ ಸಲಹೆ ನೀಡಲಾಯಿತು.

ಬಿಸಾಡಿದ ವಸ್ತುಗಳನ್ನು ನೆರಳಿನಲ್ಲಿ ಒಣಗಿಸಿ ತೊಗಲಿನಂಥ ಗಟ್ಟಿ ಸ್ಥಿತಿಯನ್ನು ಪಡೆಯಲಾಗುತ್ತದೆ, ನಂತರ ಚಾಕುವಿನ ಸಹಾಯದಿಂದ ವಿನ್ಯಾಸಗಳನ್ನು ತಯಾರಿಸುವದನ್ನು ತಿಳಿಸಿಕೊಡಲಾಯಿತು. ಈ ವಿಧಾನವು ದೀಪದ ಮುಸುಕುಗಳಿಗೆ ಹೆಚ್ಚು ಸೂಕ್ತವಾಗಿದೆ.


ತೊಗಲು ಗಟ್ಟಿಯಾಗಿಸುವ ಸಂದರ್ಭಗಳಲ್ಲಿ, ಕೊರೆಯುವ ತಾಂತ್ರಿಕತೆಯನ್ನು ಮಾತ್ರ ಅವರಿಗೆ ತಿಳಿಸಿಕೊಡಲಾಯಿತು, ಏಕೆಂದರೆ ವಿನ್ಯಾಸದ ಸುತ್ತ ವಿನ್ಯಾಸದೊಡನೆ ಕೊರೆದ ಭಾಗವು ಎದ್ದುಕಾಣುತ್ತದೆ.


ಜೇಡಿಯ ಸುರುಳಿಗಳನ್ನು ಮಾಡಿ ವಿನ್ಯಾಸಗಳನ್ನು ಸೃಷ್ಟಿಸಿ, ಅವನ್ನು ಉತ್ಪನ್ನಗಳಿಗೆ ಸೇರಿಸುವುದರಿಂದ ಸುಂದರವಾದ ನೋಟವನ್ನು ನೀಡುತ್ತವೆ. ಉತ್ಪನ್ನಗಳಿಗೆ ಉತ್ತಮ ಮೆರುಗನ್ನು ನೀಡಲು ಅವರಿಗೆ ವಸ್ತುವು ತೊಗಲು ಗಟ್ಟಿ ಸ್ಥಿತಿಯಲ್ಲಿರುವಾಗಲೆ ಬೆಣಚನ್ನು ಉಪಯೋಗಿಸಿ ಅವನ್ನು ನಯಗೊಳಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಯಿತು.ಉತ್ತಮ ರೂಪಕ್ಕಾಗಿ ಉತ್ಪನ್ನಗಳ ಮೌಲ್ಯವನ್ನು ವರ್ಧಿಸಲು ಹೆಚ್ಚು ಪ್ರಾಶಸ್ತ್ಯ ನೀಡಲು, ಮೆರುಗೆಣ್ಣೆಯ ಲೇಪನವನ್ನು, ಟೆರ್ರಾಕೊಟ್ಟ(ಮಣ್ಣುಗಾರೆ) ಬಣ್ಣದ ಹಚ್ಚುವಿಕೆ ಮತ್ತು ಬಣ್ಣಗಳ ಲೇಪನವನ್ನು ನೀಡಲು, ಕುಶಲಕರ್ಮಿಗಳಿಗೆ ಹೇಳಿಕೊಡಲಾಯಿತು. ಪಾಲ್ಗೊಂಡವರಿಗೆ ಬಣ್ಣದ ಸಂಯೋಜನೆಗಳ ಪ್ರಾಮುಖ್ಯತೆಯ ಬಗ್ಗೆಯೂ ತಿಳಿಸಿಕೊಡಲಾಯಿತು.

ಹೇಗೆ ತಲುಪುವುದು:-

ವಾಯು ಸಂಪರ್ಕ:-

ಮೈಸೂರಿನಿಂದ ಹತ್ತಿರದ ವಿಮಾನ ನಿಲ್ದಾಣವು ಬೆಂಗಳೂರು, ಅದು ಕರ್ನಾಟಕದ ರಾಜಧಾನಿಯೂ ಹೌದು. ಅದೇ ಸಮಯದಲ್ಲಿ ಬೆಂಗಳೂರು ಒಂದು ಕೈಗಾರಿಕಾ ನಗರವೂ ಹೌದು. ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ & ಕೋಲ್ಕತ್ತಾಗಳ ನಡುವೆ ಬಹುಸಂಖ್ಯೆಯ ವಿಮಾನಗಳು ಕಾರ್ಯನಿರ್ವಹಿಸುತ್ತಿರುತ್ತವೆ.

ರಸ್ತೆ ಸಂಪರ್ಕ-

ಮೈಸೂರನ್ನು ಕರ್ನಾಟಕದ ಪ್ರಮುಖ ನಗರಗಳಿಗೆ ಸಂಪರ್ಕಿಸುವ ಒಂದು ಸುವ್ಯವಸ್ಥಿತ ರಸ್ತೆಗಳ ಜಾಲವಿದೆ. ನಗರವನ್ನು ಒಂದು ರಾಜ್ಯ ಹೆದ್ದಾರಿಯು ಬೆಂಗಳೂರಿಗೆ ಸಂಪರ್ಕಿಸುತ್ತದೆ (139 ಕಿ.ಮೀ.ಗಳು).

ರೈಲು ಸಂಪರ್ಕ:-

ಮೈಸೂರು ನಗರವು ಒಂದು ರೈಲ್ವೆ ನಿಲ್ದಾಣವನ್ನು ಹೊಂದಿದೆ. ಅದು, ಬೆಂಗಳೂರು ಮತ್ತು ದಕ್ಷಿಣ ಭಾರತದ ಇತರ ಅನೇಕ ನಗರಗಳಿಗೆ ರೈಲಿನ ಸಂಪರ್ಕವನ್ನು ಹೊಂದಿದೆ. ಪ್ರತಿಷ್ಟಿತ ಲಕ್ಷುರಿ ರೈಲುಗಳು ಮತ್ತು ಇತರ ಅನೇಕ ಮೇಲುಗಳು ಮತ್ತು ಎಕ್ಸ್ ಪ್ರೆಸ್ ರೈಲುಗಳು ಈ ನಿಲ್ದಾಣಕ್ಕೆ ವ್ಯವಸ್ಥಿತವಾಗಿ ಬರುತ್ತಿರುತ್ತವೆ.








ಕರ್ನಾಟಕ     ಮೈಸೂರು     ಮಿರದಾ ಕಾವೇರಿ