ಒಂದು ಸಮುದಾಯವೆಂದರೆ, ಒಂದೇ ವಿಧದ ಉತ್ಪನ್ನಗಳನ್ನು ಉತ್ಪಾದಿಸುವ ಮತ್ತು ಸಾಮಾನ್ಯವಾದ ಅವಕಾಶಗಳು ಮತ್ತು ಅಪಾಯಗಳನ್ನು ಎದುರಿಸುತ್ತಿರುವ ಘಟಕಗಳ ಭೌಗೋಳಿಕ (ನಗರ/ಪಟ್ಟಣ/ಕೆಲವು ಅಕ್ಕಪಕ್ಕದ ಹಳ್ಳಿಗಳ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಕುಶಲಕರ್ಮಿಗಳ ಸಮುದಾಯವೆಂದರೆ, ಕರಕುಶಲ/ಕೈಮಗ್ಗ ಉತ್ಪನ್ನಗಳನ್ನು ಉತ್ಪಾದಿಸುವ ಗೃಹ ಸ್ಥಾಪಿತ ಘಟಕಗಳ ಭೌಗೋಳಿಕ (ಮುಖ್ಯವಾಗಿ ಹಳ್ಳಿಗಳಲ್ಲಿನ/ಪಟ್ಟಣ ಪ್ರದೇಶಗಳಲ್ಲಿನ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಮಾದರಿ ಸಮುದಾಯದಲ್ಲಿ, ಇಂತಹ ಉತ್ಪಾದಕರು, ಸಾಮಾನ್ಯವಾಗಿ, ಅನೇಕ ತಲೆಮಾರುಗಳಿಂದ ಸ್ಥಾಪಿತವಾದ ಉತ್ಪನ್ನಗಳನ್ನು ಉತ್ಪಾದಿಸುತ್ತಾ ಬಂದಿರುವ ಸಾಂಪ್ರದಾಯಿಕ ಕೋಮಿಗೆ ಸೇರಿದವರಾಗಿರುತ್ತಾರೆ. ವಾಸ್ತವವಾಗಿ, ಬಹುತೇಕ ಕುಶಲಕರ್ಮಿ ಸಮುದಾಯಗಳು ಶತಮಾನಗಳಷ್ಟು ಹಳೆಯ ಕುಶಲಕರ್ಮಿಗಳು. ಬಿಜಾಪುರ ಸಮುದಾಯದ ಬಗ್ಗೆ:- ಬಿಜಾಪುರ ಸಮುದಾಯವು ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯಡಿ ಬರುತ್ತದೆ. ಬಿಜಾಪುರ ಸಮುದಾಯವು ತನ್ನ ಪ್ರಬಲ ಕಾರ್ಮಿಕ ಬಳಗಕ್ಕೆ ಆಧಾರವನ್ನು ಒದಗಿಸಲು 400ಕ್ಕೂ ಅಧಿಕ ಕುಶಲಕರ್ಮಿಗಳನ್ನು ಮತ್ತು 21 ಸ್ವಸಹಾಯ ಗುಂಪುಗಳನ್ನು ರಚಿಸಲು ಶಕ್ತವಾಗಿದೆ. ಈ ಒಟ್ಟುಗೂಡಿಸುವಿಕೆಯು ದಿನೇ ದಿನೇ ಸಂವೇಗವನ್ನು ಗಳಿಸುತ್ತಿದೆ. ಹುಲ್ಲು, ಎಲೆ, ಜೊಂಡು ಮತ್ತು ನಾರು:- ತಾಳೆ ನಾರು ಮತ್ತು ಎಲೆಗಳ ವಿಭಿನ್ನ ವಿನ್ಯಾಸಗಳ ಬುಟ್ಟಿಗಳು ಹಾಗೂ ಖರ್ಜೂರದ ಕಾಂಡದಿಂದ ಮಾಡಲಾದ ಚಾಪೆಗಳನ್ನು ಒಳಗೊಂಡ ಬಹಳಷ್ಟು ಉತ್ಪನ್ನಗಳನ್ನು ಕರ್ನಾಟಕದಲ್ಲಿ ತಾಳೆಮರಗಳ ವಿವಿಧ ಭಾಗಗಳಿಂದ ಮಾಡಲಾಗುತ್ತದೆ. ಎಳೆಯ ತಾಳೆಗರಿಗಳನ್ನು ಪಟ್ಟಿಯಿಂದ ಬೇರ್ಪಡಿಸಿ ನಂತರ ಅವುಗಳ ಮೇಲೆ ಒಂದು ಚಾಲಕ ಪಟ್ಟಿಯನ್ನು ಸುತ್ತಿ, ರಿಬ್ಬನಿನಂತೆ ಮಡಚಿ, ಎಲೆಯ ಸಣ್ಣ ಪಟ್ಟಿಯಿಂದ ಬಿಗಿಗೊಳಿಸಿ ಪದರಗಳನ್ನು ಸಂಪರ್ಕಿಸಿ, ಸೂಕ್ಷ್ಮ ರಚನೆಯುಳ್ಳ ಆಹ್ಲಾದಕರ ಬಣ್ಣಗಳ ಒಂದು ಏಕರೂಪದ ಮತ್ತು ಲಯಬದ್ಧ ವಿನ್ಯಾಸಗಳುಳ್ಳ ಉತ್ಪನ್ನಗಳಾದ ಸೂಟ್ ಕೇಸುಗಳು, ಪೆಟ್ಟಿಗೆಗಳು, ಬ್ಯಾಗುಗಳು, ಬುಟ್ಟಿಗಳು, ಪರದೆಗಳು, ಚಿಕ್ಕುಗಳು, ಚಾಪೆಗಳು, ಗಾಜಿನ ಹಿಡಿಕೆಗಳು, ಹೂದಾನಿಗಳು, ಟೊಪ್ಪಿಗಳು, ಸುಂದರವಾದ ಜರಡಿಗಳು, ಬೀಸಣಿಗೆಗಳು, ಚೌಕಾಕಾರದ ಚಾಪೆಗಳು ಮತ್ತು ಆಭರಣ ಪೆಟ್ಟಿಗೆಗಳನ್ನು ಉತ್ಪಾದಿಸಲಾಗುತ್ತದೆ. ಗರಿಗಳನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಲಾದ ಎಳೆಯ ತಾಳೆ ಎಲೆಗಳಿಂದ ಮಾಡಲಾದ ವಸ್ತುಗಳೆಂದರೆ 37 ರಿಂದ 56 ಅಲಗುಗಳುಳ್ಳ ಬ್ಯಾಗುಗಳು, ಊಟದ ಪೆಟ್ಟಿಗೆಗಳು ಮತ್ತು ಮಡಚಬಹುದಾದ ಅಲಂಕೃತ ಬೀಸಣಿಗೆಗಳು. ಈ ಅಲಗುಗಳನ್ನು, ಅವುಗಳಲ್ಲಿರುವ ರಂಧ್ರಗಳಲ್ಲಿ ತಾಮ್ರದ ತಂತಿಯನ್ನು ಹರಿಸಿ ಒಟ್ಟಿಗೆ ಕಟ್ಟಿ ಬೀಸಣಿಗೆಯಾಗಿ ಹರಡುವಂತೆ ಹೊಲೆಯಲಾಗುತ್ತದೆ. ಅಲಗುಗಳ ಮೇಲೆ ಹೂವಿನ ಚಿತ್ತಾರಗಳನ್ನು ಚಿತ್ರಿಸುವುದರ ಮೂಲಕ ಬೀಸಣಿಗೆಗಳನ್ನು ಆಕರ್ಷಕವಾಗಿ ಮಾಡಲಾಗುತ್ತದೆ. ತಾಳೆ ಎಲೆ ಮತ್ತು ಕಾಂಡದ ನೇಯ್ಗೆಯು ದಕ್ಷಿಣ ಕರ್ನಾಟಕದ ಒಂದು ಏಳಿಗೆಹೊಂದಿದ ಕರಕೌಶಲವಾಗಿದ್ದು, ಈಗೀಗ ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬ್ಯಾಗುಗಳು, ಟೊಪ್ಪಿಗಳು ಮತ್ತು ಸೂಟ್ ಕೇಸುಗಳನ್ನು ಉತ್ಪಾದಿಸಲಾಗುತ್ತಿದೆ. ಗರಿಗಳನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಲಾದ ಎಳೆಯ ತಾಳೆ ಎಲೆಗಳಿಂದ ಮಾಡಲಾದ ವಸ್ತುಗಳೆಂದರೆ 37 ರಿಂದ 56 ಅಲಗುಗಳುಳ್ಳ ಬ್ಯಾಗುಗಳು, ಊಟದ ಪೆಟ್ಟಿಗೆಗಳು ಮತ್ತು ಮಡಚಬಹುದಾದ ಅಲಂಕೃತ ಬೀಸಣಿಗೆಗಳು. ಈ ಅಲಗುಗಳನ್ನು, ಅವುಗಳಲ್ಲಿರುವ ರಂಧ್ರಗಳಲ್ಲಿ ತಾಮ್ರದ ತಂತಿಯನ್ನು ಹರಿಸಿ ಒಟ್ಟಿಗೆ ಕಟ್ಟಿ ಬೀಸಣಿಗೆಯಾಗಿ ಹರಡುವಂತೆ ಹೊಲೆಯಲಾಗುತ್ತದೆ. ಅಲಗುಗಳ ಮೇಲೆ ಹೂವಿನ ಚಿತ್ತಾರಗಳನ್ನು ಚಿತ್ರಿಸುವುದರ ಮೂಲಕ ಬೀಸಣಿಗೆಗಳನ್ನು ಆಕರ್ಷಕವಾಗಿ ಮಾಡಲಾಗುತ್ತದೆ. ತಾಳೆ ಎಲೆ ಮತ್ತು ಕಾಂಡದ ನೇಯ್ಗೆಯು ದಕ್ಷಿಣ ಕೇರಳದ ಒಂದು ಏಳಿಗೆಹೊಂದಿದ ಕರಕೌಶಲವಾಗಿದ್ದು, ಈಗೀಗ ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬ್ಯಾಗುಗಳು, ಟೊಪ್ಪಿಗಳು ಮತ್ತು ಸೂಟ್ ಕೇಸುಗಳನ್ನು ಉತ್ಪಾದಿಸಲಾಗುತ್ತಿದೆ. ಜೊಂಡು ಎಂಬುದು ಬಿದಿರಿನಂತೆ ಕಾಣುವ ಟೊಳ್ಳಾದ ಕಾಂಡದೊಡನಿರುವ ಒಂದು ಸ್ಥೂಲ ಕಾಂಡದ ಹುಲ್ಲು. ಅದೊಂದು ಸ್ಥೂಲವಾದ ವಸ್ತುವಾಗಿದೆ ಮತ್ತು ಜೊಂಡು ಚಾಪೆಗಳನ್ನು ಆಕಾರಗಳು ಮತ್ತು ಛಾವಣಿಗಳಿಗೆ ಗೋಡೆಗಳಾಗಿ ಉಪಯೋಗಿಸಲಾಗುತ್ತದೆ. ಜೊಂಡನ್ನು ಚಾಪೆಗಳಾಗಿ ನೇಯುವದಕ್ಕೆ ಮುಂಚೆ ಅದನ್ನು ಮೊದಲು ಬೇರ್ಪಡಿಸಿ ಬೋಳಾಗಿಸಲಾಗುತ್ತದೆ. ಒಂದು ಮೂಲೆಯಿಂದ ಆರಂಭಿಸಿ, ಮತ್ತೊಂದು ಮೂಲೆಗೆ ನೇಯುವ ಮೂಲಕ ಇವುಗಳನ್ನು ಮಾಡಲಾಗುತ್ತದೆ. ಉದ್ದನೆಯ ಪಟ್ಟಿಗಳನ್ನು ಮಧ್ಯದಲ್ಲಿ ಮಡಚಿ, ಮತ್ತೊಂದು ಪಟ್ಟಿಯನ್ನು ಅಡ್ಡಲಾಗಿ ಸೇರಿಸಿ, ಅದನ್ನು ಕೂಡ ಮಡಚಿ, ಮತ್ತೆ ಇನ್ನೊಂದು ಪಟ್ಟಿಯನ್ನು ಅಡ್ಡಲಾಗಿ ಸೇರಿಸಲಾಗುತ್ತದೆ ಮತ್ತು ಈ ಕ್ರಿಯೆಯನ್ನು ಹಾಗೆಯೇ ಮುಂದುವರೆಸಲಾಗುತ್ತದೆ. ಈ ಅಡ್ಡಲಾದ ಪಟ್ಟಿಗಳ ನಿರಿಗೆಗಳು ಚಾಪೆಯ ತುದಿಗಳಾಗಿ ರಚನೆಯಾಗುತ್ತವೆ. ಜೊಂಡುಗಳನ್ನು ಸ್ಥೂಲವಾದ ಬುಟ್ಟಿಗಳನ್ನು ಮಾಡಲು ಸಹಾ ಉಪಯೋಗಿಸಲಾಗುತ್ತದೆ. ಉಪಯೋಗಿಸಲಾದ ಕಚ್ಛಾ ವಸ್ತುಗಳು :- ತಮಿಳುನಾಡಿನ ಹಳ್ಳಿಗಳು ತಾಳೆಮರಗಳು, ತೆಂಗು, ಖರ್ಜೂರ ಮತ್ತು ಪಾಲ್ಮೀರಗಳಿಂದ ತುಂಬಿವೆ. ಬುಟ್ಟಿಗಳು ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಉತ್ಪನ್ನಗಳನ್ನು ತಯಾರಿಸಲು ತಾಳೆಯು ಕಚ್ಛಾವಸ್ತುವಿನ ಮುಖ್ಯ ಆಕರವಾಗಿದೆ. ಇತರೆ ಕಚ್ಛಾವಸ್ತುಗಳಾದ ಬಿದಿರು, ಬೆತ್ತ, ಹುಲ್ಲುಗಳು, ನಾರುಗಳು ಮತ್ತು ಜೊಂಡುಗಳನ್ನು ಕೂಡ ಬುಟ್ಟಿಗಳು, ಹುಲ್ಲಿನ ಹೊದಿಕೆ, ಹಗ್ಗಗಳು, ಚಾಪೆಗಳು ಮತ್ತು ಇತರೆ ಅನೇಕ ವಸ್ತುಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಕ್ರಿಯೆ:- ಕತ್ತಾಳೆ ನಾರು ಕತ್ತಾಳೆ ಗಿಡದ ಕಾಂಡ ಮತ್ತು ಬಾಹ್ಯ ಚರ್ಮದಿಂದ ಸಿಗುತ್ತದೆ.ಈ ನಾರುಗಳನ್ನು ಮೊದಲು ನೆನೆಸಿ ಮೃದುಗೊಳಿಸಿ ಉದ್ಧರಿಸಲಾಗುತ್ತದೆ. ಈ ಉದ್ಧರಣಾ ಕ್ರಿಯೆಯಲ್ಲಿ ಕತ್ತಾಳೆ ಕಾಂಡಗಳನ್ನು ಒಟ್ಟಿಗೆ ಸೇರಿಸಿ,ಅವುಗಳನ್ನು ಹರಿಯುವ ನೀರಿನಲ್ಲಿ ಚೆನ್ನಾಗಿ ಅದ್ದಲಾಗುತ್ತದೆ. ಈ ರೀತಿ ಮೃದಗೊಳಿಸುವ ಕ್ರಿಯೆಗಳು ಎರಡಿವೆ: ಕಾಂಡ ಮತ್ತು ಪಟ್ಟಿ. ಮೃದಗೊಳಿಸುವ ಕ್ರಿಯೆಯ ನಂತರ, ತೇಪೆಯ ಕೆಲಸ ಆರಂಭವಾಗುತ್ತದೆ. ಸಾಮಾನ್ಯವಾಗಿ ಹೆಂಗಸರು ಮತ್ತು ಮಕ್ಕಳು ಈ ಕೆಲಸವನ್ನು ಮಾಡುತ್ತಾರೆ. ತೇಪೆಯ ಕ್ರಿಯೆಯಲ್ಲಿ, ನಾರಲ್ಲದ ವಸ್ತುಗಳನ್ನು ಕೆರೆದು ಹಾಕಿ, ನಂತರ ಕೆಲಸಗಾರರು ಅದನ್ನು ಅಗೆದು ಕತ್ತಾಳೆಯ ಕಾಂಡದಿಂದ ನಾರುಗಳನ್ನು ಪಡೆದುಕೊಳ್ಳಲಾಗುತ್ತದೆ. ಕತ್ತಾಳೆ ಬ್ಯಾಗುಗಳನ್ನು ಫ್ಯಾಷನ್ ಬ್ಯಾಗುಗಳು ಮತ್ತು ಪ್ರವರ್ತನಾ ಬ್ಯಾಗುಗಳನ್ನು ಮಾಡಲು ಉಪಯೋಗಿಸಲಾಗುತ್ತದೆ. ಕತ್ತಾಳೆಯ ಪರಿಸರ ಸ್ನೇಹಿ ಗುಣವು ಅದನ್ನು ಕಾಣಿಕೆಗಳಿಗೆ ಉಪಯೋಗಿಸಲು ಸೂಕ್ತವಾಗಿಮಾಡಿವೆ.ಕತ್ತಾಳೆಯ ನೆಲದ ಹೊದಿಕೆಗಳು ನೇಯ್ದ ಮತ್ತು ಗಂಟಾಕಿದ ಮತ್ತು ಗುಡ್ಡೆ ಹಾಕಿದ ಚಾಪೆಗಳನ್ನು ಹೊಂದಿರುತ್ತವೆ. ಭಾರತದ ದಕ್ಷಿಣ ಭಾಗಗಳಲ್ಲಿ 5/6 ಮೀಟರ್ ಅಗಲದ ಮತ್ತು ಸತತ ಉದ್ದವಿರುವ ಕತ್ತಾಳೆಯ ಚಾಪೆಗಳು ಮತ್ತು ಹೊದಿಕೆಗಳನ್ನು, ಘನ ಮತ್ತು ಮೆಚ್ಚಿನ ಮಬ್ಬುಗಳಲ್ಲಿ, ಮತ್ತು ಬೌಕ್ಲ್, ಪನಾಮ, ಹೆರ್ರಿಂಗ್ಬೋನ್ ಇತ್ಯಾದಿ ವಿಭಿನ್ನ ನೇಯ್ಗೆಗಳಲ್ಲಿ, ಸುಲಭವಾಗಿ ನೇಯಲಾಗುತ್ತದೆ. ಭಾರತದ ಕೇರಳದಲ್ಲಿ, ಭಾರಿ ಪ್ರಮಾಣಗಳಲ್ಲಿ, ಶಕ್ತಿಮಗ್ಗ ಮತ್ತು ಕೈಮಗ್ಗಗಳ ಮೂಲಕ ಕತ್ತಾಳೆಯ ಚಾಪೆಗಳು ಮತ್ತು ಕಂಬಳಿಗಳನ್ನು ತಯಾರಿಸಲಾಗುತ್ತದೆ.ಸಾಂಪ್ರದಾಯಕ ಶತ್ರಂಜಿ ಚಾಪೆಯು ಗೃಹಾಲಂಕಾರದಲ್ಲಿ ಹೆಚ್ಚು ಪ್ರಸಿದ್ದವಾಗುತ್ತಿದೆ. ನೇಯದ ಕತ್ತಾಳೆ ಮತ್ತು ಅದರ ಸಂಯೋಜನೆಗಳನ್ನು ಕೆಳಗಿನ ಆಧಾರಕ್ಕಾಗಿ,ಲಿನೋಲಿಯಂ ತಳಹದಿ ಇತ್ಯಾದಿಗಳಿಗೆ ಉಪಯೋಗಿಸಬಹುದಾಗಿದೆ.ಆದ್ದರಿಂದ, ಬೀಜದಿಂದ ಆರಂಭಿಸಿ ಸತ್ತ ನಾರಿನವರೆಗೂ ಕತ್ತಾಳೆಯು ಅತಿ ಪರಿಸರ ಸ್ನೇಹಿ ನಾರಾಗಿದೆ,ಏಕೆಂದರೆ ಸತ್ತ ನಾರುಗಳನ್ನು ಮತ್ತೆ ಪುನರುಪಯೋಗಿಸಬಹುದು. ಕಾರ್ಯವಿಧಾನಗಳು:- ಈ ಕ್ರಿಯಾತ್ಮಕ ಕೋರ್ಸಿನ ಉದ್ದೇಶವು ಕಾರ್ಯವಿಧಾನದ ಆಧುನೀಕರಣ ಮತ್ತು ಕೌಶಲ್ಯಗಳನ್ನು ಉತ್ತಮಗೊಳಿಸುವುದು ಮತ್ತು ಕುಶಲಕರ್ಮಿಯನ್ನು ತನ್ನ ಜೀವನದ ಸಾಮಾನ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಂತೆ ತನ್ನ ಉತ್ಪಾದಕತೆಯನ್ನು ಮತ್ತು ಗಳಿಕೆಯನ್ನು ಹೆಚ್ಚಿಸಲು ಶಕ್ತಗೊಳಿಸುವುದು ಮತ್ತು ಯುಕ್ತವಾದ ಸಮಯದಲ್ಲಿ ಬಡತನದ ಕಪಿಮುಷ್ಠಿಯಿಂದ ಹೊರಬರುವಂತೆ ಮಾಡುವುದು. ಹೇಗೆ ತಲುಪುವುದು:- ಬಿಜಾಪುರ ದಕ್ಷಿಣ ಮತ್ತು ಪಶ್ಚಿಮ ಭಾರತದ ಬಹುತೇಕ ಸ್ಥಳಗಳಿಗೆ ರಸ್ತೆ ಸಂಪರ್ಕವನ್ನು ಹೊಂದಿದೆ. ಇವುಗಳೆಂದರೆ: ಐಹೊಳೆ (110 ಕಿ.ಮೀ.), ಬಾದಾಮಿ (138 ಕಿ.ಮೀ.), ಪಟ್ಟದಕಲ್ಲು (148 ಕಿ.ಮೀ.), ಹಂಪೆ(220 ಕಿ.ಮೀ.), ಬೆಳಗಾವಿ (205 ಕಿ.ಮೀ.), ಬೆಂಗಳೂರು (550 ಕಿ.ಮೀ.), ಮುಂಬೈ (486 ಕಿ.ಮೀ.). ರಾಷ್ಟ್ರೀಯ ಹೆದ್ದಾರಿ 13 ಜಿಲ್ಲೆಯ ಪೂರ್ವ ಮತ್ತು ಕೇಂದ್ರ ಭಾಗಗಳ ಮೂಲಕ ಹಾದುಹೋಗುತ್ತದೆ. ನೀವು ಸುಲಭವಾಗಿ ಬಿಜಾಪುರವನ್ನು ರೈಲಿನ ಮೂಲಕ ತಲುಪಬಹುದು ಏಕೆಂದರೆ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಹುಬ್ಬಳ್ಳಿಯನ್ನು ಸಂಪರ್ಕಿಸುವ ಪಥವು ಜಿಲ್ಲೆಯ ಮಧ್ಯದಲ್ಲಿ ಇಂಡಿ ಮತ್ತು ಬಸವನ ಬಾಗೇವಾಡಿ ಮೂಲಕ ಹಾದುಹೋಗುತ್ತದೆ. ಬಿಜಾಪುರವು ಬೆಂಗಳೂರು, ಮುಂಬೈ (ಸೋಲಾಪುರ ಮೂಲಕ), ಹೈದರಾಬಾದ್ (ಸೋಲಾಪುರ ಮೂಲಕ), ಹೊಸಪೇಟೆ (ಗದಗ ಮೂಲಕ), ವಾಸ್ಕೋ ಡ ಗಾಮಾ (ಹುಬ್ಬಳ್ಳಿ ಮತ್ತು ಲೋಂಡಾ ಮೂಲಕ) ಮುಂತಾದ ಸ್ಥಳಗಳಿಗೆ ಉತ್ತಮ ಸಂಪರ್ಕಹೊಂದಿದೆ. ಬಿಜಾಪುರ ರೈಲ್ವೆ ನಿಲ್ದಾಣವು ದಕ್ಷಿಣ ಕೇಂದ್ರ ರೈಲ್ವೆಯ (SCR) ಹುಬ್ಬಳ್ಳಿ ವಿಭಾಗದ ಆಡಳಿತ ನಿಯಂತ್ರಣದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವು ಬೆಳಗಾವಿ (205 ಕಿ.ಮೀ.)ಯಾಗಿದ್ದು, ಅದು ಮುಂಬೈ ಮತ್ತು ಬೆಂಗಳೂರಿಗೆ ಉತ್ತಮ ಸಂಪರ್ಕಹೊಂದಿದೆ.