ಒಂದು ಸಮುದಾಯವೆಂದರೆ, ಒಂದೇ ವಿಧದ ಉತ್ಪನ್ನಗಳನ್ನು ಉತ್ಪಾದಿಸುವ ಮತ್ತು ಸಾಮಾನ್ಯವಾದ ಅವಕಾಶಗಳು ಮತ್ತು ಅಪಾಯಗಳನ್ನು ಎದುರಿಸುತ್ತಿರುವ ಘಟಕಗಳ ಭೌಗೋಳಿಕ (ನಗರ/ಪಟ್ಟಣ/ಕೆಲವು ಅಕ್ಕಪಕ್ಕದ ಹಳ್ಳಿಗಳ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಕುಶಲಕರ್ಮಿಗಳ ಸಮುದಾಯವೆಂದರೆ, ಕರಕುಶಲ/ಕೈಮಗ್ಗ ಉತ್ಪನ್ನಗಳನ್ನು ಉತ್ಪಾದಿಸುವ ಗೃಹ ಸ್ಥಾಪಿತ ಘಟಕಗಳ ಭೌಗೋಳಿಕ (ಮುಖ್ಯವಾಗಿ ಹಳ್ಳಿಗಳಲ್ಲಿನ/ಪಟ್ಟಣ ಪ್ರದೇಶಗಳಲ್ಲಿನ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಮಾದರಿ ಸಮುದಾಯದಲ್ಲಿ, ಇಂತಹ ಉತ್ಪಾದಕರು, ಸಾಮಾನ್ಯವಾಗಿ, ಅನೇಕ ತಲೆಮಾರುಗಳಿಂದ ಸ್ಥಾಪಿತವಾದ ಉತ್ಪನ್ನಗಳನ್ನು ಉತ್ಪಾದಿಸುತ್ತಾ ಬಂದಿರುವ ಸಾಂಪ್ರದಾಯಿಕ ಕೋಮಿಗೆ ಸೇರಿದವರಾಗಿರುತ್ತಾರೆ. ವಾಸ್ತವವಾಗಿ, ಬಹುತೇಕ ಕುಶಲಕರ್ಮಿ ಸಮುದಾಯಗಳು ಶತಮಾನಗಳಷ್ಟು ಹಳೆಯ ಕುಶಲಕರ್ಮಿಗಳು.ತುಮರಿಕೊಪ್ಪ ಸಮುದಾಯದ ಬಗ್ಗೆ:-ತುಮರಿಕೊಪ್ಪ ಸಮುದಾಯವು ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯಡಿ ಬರುತ್ತದೆ.ತುಮರಿಕೊಪ್ಪ ಸಮುದಾಯವು ತನ್ನ ಪ್ರಬಲ ಕಾರ್ಮಿಕ ಬಳಗಕ್ಕೆ ಆಧಾರವನ್ನು ಒದಗಿಸಲು 60ಕ್ಕೂ ಅಧಿಕ ಕುಶಲಕರ್ಮಿಗಳನ್ನು ಮತ್ತು 5 ಸ್ವಸಹಾಯ ಗುಂಪುಗಳನ್ನು ರಚಿಸಲು ಶಕ್ತವಾಗಿದೆ. ಈ ಒಟ್ಟುಗೂಡಿಸುವಿಕೆಯು ದಿನೇ ದಿನೇ ಸಂವೇಗವನ್ನು ಗಳಿಸುತ್ತಿದೆ.ಕರ ಮುದ್ರಿತ:-ಹ್ಯಾಂಡ್ - ಬ್ಲಾಕ್ ಮುದ್ರಣವನ್ನು ಭಾರತದ ಪರ್ಯಂತ ಉಪಯೋಗಿಸುತ್ತಾರೆ ಮತ್ತು ಪ್ರತಿಯೊಂದು ಪ್ರದೇಶವು ತನ್ನದೇ ಆದ ಸ್ವಂತ ಶೈಲಿ ಮತ್ತು ಬಣ್ಣದ ವಿನ್ಯಾಸಗಳನ್ನು ಹೊಂದಿದೆ. ಕರ್ನಾಟಾಕದಲ್ಲಿನ ಪಿಲಾಕುವಾದಲ್ಲಿ ಕುಶಲಕರ್ಮಿಗಳು ಹಿತ್ತಾಳೆಯ ಬ್ಲಾಕ್ ಗಳನ್ನು ಮಾಡಿ ಅದನ್ನು ವಿನ್ಯಾಸದ ಬಾಹ್ಯವನ್ನು ಗುರುತಿಸಲು ಉಪಯೋಗಿಸುತ್ತಾರೆ. ಜೈಪುರದಲ್ಲಿ, ಕುಶಲಕರ್ಮಿಗಳು ಸಗೂನ್ ಮರದ ಮೇಲೆ ಮರದ ಬ್ಲಾಕ್ ಗಳನ್ನು ಕೆತ್ತುತ್ತಾರೆ. ನಂತರ ಕೆತ್ತಿದ ಭಾಗವನ್ನು ಬಣ್ಣದಲ್ಲಿ ಅದ್ದಿಟ್ಟು ಬಟ್ಟೆಯ ಮೇಲೆ ಮುದ್ರಿಸಲಾಗುತ್ತದೆ. ಗುಜರಾತಿನ ಪೆಥಾಪುರವು ಬ್ಲಾಕ್ ಮುದ್ರಣಕ್ಕೆ ಪ್ರಮುಖ ಕೇಂದ್ರವಾಗಿ ಉಳಿದಿದೆ. ಇಂದು ಗಿರಣಿಗಳ ಕಾರಣದಿಂದ ಈ ಕುಶಲಕರ್ಮವು ಅವನತಿಯ ಹಂತದಲ್ಲಿದೆ.ಚಂದೇರಿ ಸ್ಟೋಲುಗಳು ಮತ್ತು ದುಪ್ಪಟ್ಟಾಗಳು, ಮಂಗಳಗಿರಿ ಸಲ್ವಾರ್ ಸೂಟುಗಳು ಮತ್ತು ಸೀರೆಗಳು, ಮಹೇಶ್ವರಿ ಸಲ್ವಾರ್ ಸೂಟುಗಳು ಮತ್ತು ಸೀರೆಗಳು, ತುಸ್ಸಾರ್ ಸಲ್ವಾರ್ ಸೂಟುಗಳು ಮತ್ತು ಸೀರೆಗಳು, ಜಾರ್ಜೆಟ್ ಸೀರೆಗಳು, ಷಿಫಾನ್ ಸೀರೆಗಳು, ಖಾದಿ ಹತ್ತಿ ಮತ್ತು ಖಾದಿ ರೇಷ್ಮೆಗಳಲ್ಲಿನ ಮುದ್ರಿತ ಬಟ್ಟೆಗಳು, ವಾಯಿಲ್ ಮತ್ತು ಹೊದಿಕೆಗಳಲ್ಲಿನ ಮುದ್ರಿತ ಹತ್ತಿಗಳು.ಜಮ್ದಾನಿಗಳನ್ನು ಸಾಮಾನ್ಯವಾಗಿ ನೇಯುವುದು ತಿಳಿ ಬಣ್ಣದ ಹಿನ್ನೆಲೆಯಲ್ಲಿರುವ ಬಿಳಿ, ಮರೂನ್, ಕಪ್ಪು, ಹಸಿರು, ಚಿನ್ನ, ಬೆಳ್ಳಿ ಮತ್ತು ಚಿನ್ನದ ಬಣ್ಣದ ಮುಗಾ ರೇಷ್ಮೆಯಲ್ಲಿನ ವಿನ್ಯಾಸಗಳಲ್ಲಿ. ಜಮ್ದಾನಿಗಳು ಮತ್ತು ತಂಗೈಲುಗಳ ನಡುವೆ ಅಧಿಕ ನೇಯ್ಗೆಯ ವಿನ್ಯಾಸದ ತಾಂತ್ರಿಕತೆಯಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ; ಜಮ್ದಾನಿಯಲ್ಲಿನ ಕಸೂತಿ ದಾರವನ್ನು ಪ್ರತಿ ಸುತ್ತಿನ ನಂತರ ಸೇರಿಸಿದರೆ, ತಂಗೈಲಿನಲ್ಲಿ ಕಸೂತಿ ದಾರವನ್ನು ಪ್ರತಿ ಎರಡು ಸುತ್ತಿನ ನಂತರ ಸೇರಿಸಲಾಗುತ್ತದೆ. ತಂಗೈಲುಗಳ ಮುಖ್ಯ ಗುಣಲಕ್ಷಣವೆಂದರೆ ನೆಲದ ಸುತ್ತ ಅಧಿಕ ನೇಯ್ಗೆ, ಸಣ್ಣ ನಮೂನೆಗಳನ್ನು ಪುನರಾರ್ವತಿಸಲಾಗುತ್ತದೆ. ಪರಂಪರಾಗತವಾಗಿ ಜಮ್ದಾನಿಗಳನ್ನು ಬಿಳಿ ಬಣ್ಣದ ಬ್ಲೀಚ್ ಮಾಡಿದ ವಿನ್ಯಾಸಗಳುಳ್ಳ ಬಿಳಿಬಣ್ಣಗಳಲ್ಲಿ ನೇಯಲಾಗುತ್ತಿದೆ. ಜಾಮಿತಿಯ ವಿನ್ಯಾಸಗಳುಳ್ಳ ಸಾಂಪ್ರದಾಯಿಕ ಜಮ್ದಾನಿ ಸೀರೆಗಳು ಮತ್ತು ಹತ್ತಿಯ ತಂಗೈಲುಗಳು ಹೆಚ್ಚು ಜನಪ್ರಿಯವಾಗಿವೆ ಮತ್ತು ಪಶ್ಚಿಮ ಬಂಗಾಳದ ನೇಕಾರರಿಂದ ಇಂದಿಗೂ ನೇಯಲಾಗುತ್ತಿದೆ. ಇವುಗಳು ಹಗುರವಾಗಿರುವುದರಿಂದ ಭಾರತದಂತ ಉಷ್ಣವಲಯದ ದೇಶಗಳಲ್ಲಿ ದೈನಂದಿನ ಉಡುಗೆಗಳಾಗಿ ಉಪಯೋಗಿಸಲು ಹೆಚ್ಚು ಸೂಕ್ತವಾಗಿದೆ.
ಉಪಯೋಗಿಸಲಾದ ಕಚ್ಛಾ ವಸ್ತುಗಳು :-
ಯಾವುದೇ ತಂತು, ನಾರು ಅಥವಾ ಬಟ್ಟೆಯಾಗಿ ಪರಿವರ್ತಿಸಬಹುದಾದ ಯಾವುದಾದರೂ ಮತ್ತು ಪಾರಿಣಾಮಿಕ ವಸ್ತುವೂ ಸಹ. ಈ ಪದವು ಮೊದಲು ನೇಯ್ದ ಬಟ್ಟೆಗಳಿಗೆ ಮಾತ್ರವೇ ಅನ್ವಯಿಸುತ್ತಿತ್ತು ಆದರೆ ಈಗ ಹೆಣೆದ, ಬಂಧಿಸಿದ, ದಪ್ಪ ಉಣ್ಣೆಯ ಮತ್ತು ಕುಚ್ಚು ಹಾಕಿದ ಬಟ್ಟೆಗಳಿಗೂ ಸಹ ಅನ್ವಯಿಸುತ್ತದೆ. ಜವಳಿಗಳ ಉತ್ಪಾದನೆಯಲ್ಲಿ ಉಪಯೋಗಿಸುವ ಕಚ್ಛಾ ವಸ್ತುಗಳೆಂದರೆ ನಾರುಗಳು, ಅವು ನೈಸರ್ಗಿಕ ಮೂಲಗಳಿಂದ ಪಡೆದವಾಗಿರಬಹುದು(ಉದಾ: ಉಣ್ಣೆ) ಅಥವಾ ರಾಸಾಯನಿಕ ವಸ್ತುಗಳಿಂದ ಪಡೆದವಾಗಿರಬಹುದು(ಉದಾ:ಪಾಲಿಸ್ಟರ್). ಜವಳಿಗಳನ್ನು ಅವುಗಳ ಘಟಕ ನಾರುಗಳ ಪ್ರಕಾರ ರೇಷ್ಮೆ, ಉಣ್ಣೆ, ಕಿತ್ತಾನಾರು, ಹತ್ತಿ, ರೆಯಾನ್, ನೈಲಾನ್, ಮತ್ತು ಪಾಲಿಸ್ಟರ್ ನಂತಹ ಸಂಶ್ಲೇಷಿತ ನಾರುಗಳು ಮತ್ತು ಕೆಲವು ಅಸೇಂದ್ರೀಯ ನಾರುಗಳಾದ ಬಂಗಾರದ ಬಟ್ಟೆ, ಗಾಜಿನ ನಾರು ಮತ್ತು ಕಲ್ನಾರು ಬಟ್ಟೆಗಳಾಗಿ ವಿಂಗಡಿಸಬಹುದು.
ಉತ್ಪಾದನಾ ಪ್ರಕ್ರಿಯೆ:-
ಜವಳಿ ಕರ ಮುದ್ರಣವೆಂದರೆ ಬಟ್ಟೆಗಳಿಗೆ ನಿರ್ದಿಷ್ಟ ವಿನ್ಯಾಸ ಅಥವಾ ಮಾದರಿಗಳಲ್ಲಿ ಬಟ್ಟೆಗಳಿಗೆ ಬಣ್ಣವನ್ನು ಹಚ್ಚುವುದು ಎಂದರ್ಥ. ಸರಿಯಾಗಿ ಮುದ್ರಿಸಿದ ಬಟ್ಟೆಗಳಲ್ಲಿ, ಒಗೆತ ಮತ್ತು ಘರ್ಷಣೆಯನ್ನು ಪ್ರತಿರೋಧಿಸಲು ಬಣ್ಣವನ್ನು ಬಂಧಿಸಲಾಗುತ್ತದೆ.ಜವಳಿ ಮುದ್ರಣವು ಬಣ್ಣ ಹಾಕುವುದಕ್ಕೆ ಸಂಬಂಧಿಸಿದೆಯಾದರೂ, ಬಣ್ಣ ಹಾಕುವುದರಲ್ಲಿ ಇಡೀ ಬಟ್ಟೆಯು ಏಕರೂಪವಾಗಿ ಒಂದೇ ಬಣ್ಣದಿಂದ ಆವೃತವಾಗಿರುತ್ತದೆ, ಆದರೆ ಮುದ್ರಣದಲ್ಲಿ ಒಂದು ಅಥವಾ ಹೆಚ್ಚು ಬಣ್ಣಗಳನ್ನು ಕೆಲವು ನಿರ್ದಿಷ್ಟ ಭಾಗಗಳಿಗೆ ಮಾತ್ರವೇ ಸೂಕ್ಷ್ಮವಾದ ನಿಶ್ಚಿತ ವಿನ್ಯಾಸಗಳಲ್ಲಿ ಹಚ್ಚಲಾಗುತ್ತದೆ. ಮುದ್ರಣದಲ್ಲಿ ಬಟ್ಟೆಯ ಮೇಲೆ ಬಣ್ಣಗಳನ್ನು ಇಡಲು, ಮರದ ದಿಮ್ಮಿಗಳು, ಸ್ಟೆನ್ಸಿಲ್ಗಳು, ಕೆತ್ತನೆಯ ಕೆಲಸದ ತಟ್ಟೆಗಳು, ಹೊರಳಿಸುವ ಸಾಧನಗಳು, ಅಥವಾ ರೇಷ್ಮೆಯ ಪರದೆಗಳನ್ನು ಉಪಯೋಗಿಸಲಾಗುತ್ತದೆ. ಮುದ್ರಣದಲ್ಲಿ ಉಪಯೋಗಿಸುವ ರಂಗುಗಳು ಗಟ್ಟಿಯಾದ ಬಣ್ಣಗಳನ್ನು ಹೊಂದಿದ್ದು, ವಿನ್ಯಾಸ ಅಥವಾ ಮಾದರಿಯ ಮಿತಿಗಿಂತ ಮೇಲಕ್ಕೆ ಬಣ್ಣವು ದಾರದ ನಾಳಗಳ ಮೂಲಕ ಹರಡುವುದನ್ನು ತಡೆಯುತ್ತದೆ.ಸಾಂಪ್ರದಾಯಿಕ ಜವಳಿ ಮುದ್ರಣ ತಾಂತ್ರಿಕತೆಗಳನ್ನು ನಾಲ್ಕು ಶೈಲಿಗಳಲ್ಲಿ ವಿಂಗಡಿಸಬಹುದು:
ನಿರೋಧಕ ಮತ್ತು ಹೊರಸೂಸುವಿಕೆ ತಾಂತ್ರಿಕತೆಗಳು 19ನೇ ಶತಮಾನದಲ್ಲಿ ಹೆಚ್ಚಾಗಿ ರೂಢಿಯಲ್ಲಿತ್ತು, ಇತರ ಬಣ್ಣಗಳ ಬ್ಲಾಕ್-ಮುದ್ರಣಕ್ಕೆ ಮುಂಚೆಯೇ ತಾಂತ್ರಿಕತೆಗಳ ಸಂಯೋಜನೆಯಲ್ಲಿ ಊದಾ ನಿರೋಧಕವನ್ನು ಉಪಯೋಗಿಸಿ ನೀಲಿ ಬಣ್ಣದ ಹಿನ್ನೆಲೆಗಳನ್ನು ಸೃಷ್ಟಿಸುತ್ತಿದ್ದರು. ಬಹುತೇಕ ನವೀನ ಕೈಗಾರೀಕೃತ ಮುದ್ರಣಗಳು ನೇರ ಮುದ್ರಣ ತಾಂತ್ರಿಕತೆಗಳನ್ನು ಉಪಯೋಗಿಸುತ್ತವೆ.1. ಪರದೆಗಳ ಸೃಷ್ಟಿ - ಒಂದು ಕಲೆರಹಿತ ಉಕ್ಕಿನ ಚೌಕಟ್ಟಿನ ಮೇಲೆ ಒಂದು ನಯವಾಗಿ ಹೆಣೆದ ದಾಕ್ರಾನ್ ಮೆಶ್ ಬಟ್ಟೆ ಯನ್ನು ಬಿಗಿಯಾಗಿ ಎಳೆಯುವುದರ ಮೂಲಕ ಪರದೆಗಳನ್ನು ಮಾಡಲಾಗುತ್ತದೆ. ದಾಕ್ರಾನನ್ನು ಅಪಾರದರ್ಶಕ ಕಪ್ಪು ಮಸಿಯಾದ ದೃಕ್ ಸಂವೇದಿತ ಕದಡುಗೆಯಿಂದ ಲೇಪಿತಗೊಳಿಸಲಾಗಿರುತ್ತದೆ, ಇದನ್ನು ಚಿತ್ರಣದ ಮೇಲೆ ಬಿಡಿಸಲಾಗಿರುತ್ತದೆ, ನಂತರ ಬೆಳಕಿಗೆ ಪ್ರದರ್ಶಿಸಿ "ಋಣ" ಚಿತ್ರವನ್ನು ಉತ್ಪಾದಿಸಲಾಗುತ್ತದೆ. ಇದರ ಪರಿಣಾಮವಾಗಿ ನಮಗೆ ಸಿಗುವ ಪರದೆಯು, ಮಸಿಯಿಂದ ಆವೃತವಾಗಿದ್ದು, ಚಿತ್ರಣಕ್ಕೆ ತಕ್ಕಂತೆ ಮಸಿಯನ್ನು ಮಾತ್ರ ಒಳಹೋಗಲು ಬಿಡುತ್ತದೆ.2. ಮಸಿಯ ಮಿಶ್ರಣ ಮತ್ತು ಹಚ್ಚುವಿಕೆ.3. ಮುದ್ರಣದ ಮೇಜಿಗೆ ಬಟ್ಟೆಯನ್ನು ಸಿಕ್ಕಿಸುವುದು.4. ಬಟ್ಟೆಯ ಮುದ್ರಣ - ಪರದೆಯನ್ನು ಬಟ್ಟೆಯ ಮೇಲೆ ಹಾಕಲಾಗಿರುತ್ತದೆ ಮತ್ತು ಮಸಿಯನ್ನು ಪರದೆಯ ಉದ್ದಕ್ಕೂ ಪಸರಿಸುವಂತೆ ಹಾಕಲಾಗುತ್ತದೆ.5. ಬಟ್ಟೆಯನ್ನು ಒಣಗಿಸುವುದುತಾಂತ್ರಿಕತೆಗಳು:-ಈ ತಾಂತ್ರಿಕತೆಯಲ್ಲಿ ಒಂದು ನಿರ್ದಿಷ್ಟ ಸಣ್ಣ ಓರಣಗಳಲ್ಲಿ, ಬಟ್ಟೆಯ ಮೇಲ್ಮೈಯ ಮೇಲೆ ವಿಶಿಷ್ಟ ಬಣ್ಣ ಮದ್ಯಸಾರವಾದ ಮಸಿಯ ಸಣ್ಣ ಹನಿಗಳನ್ನು ಬೃಂಹಿಸುವುದರ ಮೂಲಕ ಪ್ರತಿಯೊಂದು ಬಣ್ಣಗಳನ್ನು, ಬೇಕಾದ ವಿನ್ಯಾಸದೊಡನೆ ರಚಿಸಲಾಗುತ್ತದೆ. ಜವಳಿಗಳ ಅಲಂಕಾರಿಕ ಮೌಲ್ಯವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಉಪಯೋಗಿಸಿದ ಮುದ್ರಣದ ಅತಿ ಹಳೆಯ ರೂಪ ಇದಾಗಿದೆ. ಇದು ಟೈ ಮತ್ತು ಡೈನ ಸಾಂಪ್ರದಾಯಿಕ ತಾಂತ್ರಿಕತೆಯಾಗಿದೆ. ಪರದೆಯ ಮೂಲಕ ಬಣ್ಣವನ್ನು ಚೆಲ್ಲಲು ಒಂದು ಸಿಂಪಡಿಕೆಯನ್ನು ಉಪಯೋಗಿಸಲಾಗುತ್ತದೆ ಮತ್ತು ಒಂದು ವಿನ್ಯಾಸವುಳ್ಳ ರಾಶಿಯನ್ನು ಹಚ್ಚಲು ವಿದ್ಯುತ್ ಲೇಪನವನ್ನು ಉಪಯೋಗಿಸಲಾಗುತ್ತದೆ. ಈ ತಾಂತ್ರಿಕತೆಯಲ್ಲಿ ಮೂಲರಂಗನ್ನು ಉಳಿಸಿಕೊಳ್ಳಬೇಕಾದ ದಪ್ಪ ಮತ್ತು ಸಣ್ಣ ದಾರಗಳನ್ನು ಒಟ್ಟಿಗೆ ಕಟ್ಟಿಹಾಕಲಾಗುತ್ತದೆ ಮತ್ತು ನಂತರ ಬಣ್ಣ ಹಾಕಲಾಗುತ್ತದೆ.ಹೇಗೆ ತಲುಪುವುದು:-ಹುಬ್ಬಳ್ಳಿಯಲ್ಲಿನ ವಿಮಾನ ನಿಲ್ದಾಣವು (18 ಕಿ.ಮೀ.) ಧಾರವಾಡಕ್ಕೆ ತುಂಬಾ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ಪಟ್ಟಣವು ರೈಲು ಮತ್ತು ರಸ್ತೆಗಳ ಜಾಲದಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಮುಂಬೈ (ಮಹಾರಾಷ್ಟ್ರ) ಇಂದ ಧಾರವಾಡಕ್ಕೆ (ಕರ್ನಾಟಕ) 558 ಕಿ.ಮೀ.ಗಳು ಮತ್ತು ರಸ್ತೆಯಿಂದ ಸರಿಸುಮಾರು 9 ಗಂಟೆಗಳು ತೆಗೆದುಕೊಳ್ಳುತ್ತದೆ.